ರಾಜಕೀಯ ಹೊರತುಪಡಿಸಿ ಬೇರೆ ಎಲ್ಲಾ ವ್ಯವಹಾರದಲ್ಲಿ ನಷ್ಟದಲ್ಲಿದ್ದೇನೆ; ಬಿಜೆಪಿ ಸಂಸದ ಏನೆಲ್ಲಾ ಹೇಳಿದ್ರು?

ಗುಜರಾತ್‌; ಬಿಜೆಪಿ ಸಂಸದ ಭರತ್‌ ಸಿನ್ಹ ದಾಭಿ ರಾಜಕೀಯವನ್ನು ಹೊರತುಪಡಿಸಿ ನನ್ನ ಎಲ್ಲಾ ವ್ಯವಹಾರಗಳು ನಷ್ಟದಲ್ಲಿವೆ ಮತ್ತು ಅಂತಿಮವಾಗಿ ಮುಚ್ಚಲ್ಪಟ್ಟಿದೆ ಎಂದು ಹೇಳಿದ್ದಾರೆ.

ಹೇಮಚಂದ್ರಾಚಾರ್ಯ ವಿಶ್ವವಿದ್ಯಾಲಯದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ದಾಬಿ, ನಾನು 26 ವ್ಯವಹಾರಗಳನ್ನು ನಡೆಸಿದ್ದೆ, ಆದರೆ ಎಲ್ಲವು ಕೂಡ ನಷ್ಟವಾಗಿ ಮುಚ್ಚಿದ್ದೇನೆ. ಆದರೆ ಇದು (ರಾಜಕೀಯ) ಚೆನ್ನಾಗಿ ಸಾಗಿದೆ. ಸರಪಂಚ್‌ನಿಂದ ಸಂಸತ್ತಿನವರೆಗೆ ಬಂದಿದ್ದೇನೆ. ನನಗೆ ಈಗ ಯಾವುದೇ ಸಮಸ್ಯೆ ಇಲ್ಲ ಎಂದು ದಾಭಿ ಹೇಳಿದ್ದಾರೆ.

ಸಂಸದರ ಹೇಳಿಕೆಯನ್ನು ಪ್ರತಿಪಕ್ಷ ಕಾಂಗ್ರೆಸ್ ಟೀಕಿಸಿದೆ. ಕಾಂಗ್ರೆಸ್ ವಕ್ತಾರ ಮನೀಶ್ ದೋಷಿ ಅವರು ಈ ಕುರಿತು ಪ್ರತಿಕ್ರಿಯಿಸಿ, ಬಿಜೆಪಿ ಸಂಸದರು ಹೇಳಿರುವುದು ಅವರಿಗೆ ಸೀಮಿತವಾಗಿಲ್ಲ ಏಕೆಂದರೆ ರಾಜಕೀಯವು ಬಿಜೆಪಿಗೆ ಹಲವು ವರ್ಷಗಳಿಂದ ವ್ಯಾಪಾರವಾಗಿದೆ. ಭರತ್‌ಸಿನ್ಹ ದಾಭಿ ಅವರು ತಮ್ಮ ವ್ಯಾಪಾರವು ಸರಪಂಚ್‌ನಿಂದ ಸಂಸದರವರೆಗೆ ಉತ್ತಮವಾಗಿ ನಡೆಯುತ್ತಿದೆ ಎಂದು ಹೇಳುತ್ತಿದ್ದರೂ, ಅವರು ಇನ್ನೂ ಗಳಿಕೆಯಲ್ಲಿ ಇತರ ಬಿಜೆಪಿ ನಾಯಕರಿಗಿಂತ ಇನ್ನೂ ಹಿಂದೆ ಉಳಿದಿದ್ದಾರೆ ಎಂದು ಹೇಳಿದ್ದಾರೆ.

ಬಿಜೆಪಿ ರಾಜಕೀಯವನ್ನು ತನ್ನ ವ್ಯಾಪಾರವನ್ನಾಗಿ ಮಾಡಿಕೊಂಡಿದೆ. ಇದು ಬಿಜೆಪಿಯ ವ್ಯವಹಾರದ ಮಾದರಿಯಾಗಿದ್ದು, ಅದನ್ನು ನಾಯಕರೊಬ್ಬರು ಸಾರ್ವಜನಿಕ ವೇದಿಕೆಯಲ್ಲಿ ಪ್ರಸ್ತುತಪಡಿಸಿದ್ದಾರೆ. ಕೇಸರಿ ಪಕ್ಷವು ರಾಜಕೀಯವನ್ನು ವ್ಯಾಪಾರವಾಗಿ ತೆಗೆದುಕೊಂಡು ದೇಶದ ಪ್ರಜಾಪ್ರಭುತ್ವವನ್ನು ನಾಶಪಡಿಸುತ್ತಿದೆ ಎಂದು ಅವರು ಹೇಳಿದ್ದಾರೆ.

ಟಾಪ್ ನ್ಯೂಸ್