ಬಿಜೆಪಿ ಶಾಸಕರಿಗೆ ಪಾವತಿಯಾಗಿದೆಯಾ 90 ಲಕ್ಷ ಕಮಿಷನ್?; ಗುತ್ತಿಗೆದಾರರ ಸಂಘದಿಂದ ಗಂಭೀರ ಆರೋಪ, ರಾಜ್ಯದಲ್ಲಿ ಮತ್ತೆ ಚರ್ಚೆಗೆ ಬಂದ ಕಮಿಷನ್ ದಂಧೆ

ಚಿತ್ರದುರ್ಗ;ರಾಜ್ಯದಲ್ಲಿ ಮತ್ತೆ ಕಮಿಷನ್ ಸದ್ದು ಮಾಡಿದ್ದು, ಚಿತ್ರದುರ್ಗದ ಬಿಜೆಪಿ ಶಾಸಕ ತಿಪ್ಪಾರೆಡ್ಡಿ ಅವರು ನಮಗೆ ನೇರವಾಗಿ ಕಮಿಷನ್ ಕೇಳಿದ್ದಾರೆ. ಶಾಸಕರು ಕಮಿಷನ್ ಕೇಳಿರುವ ಬಗ್ಗೆ ಎಲ್ಲ ಮೇಸಜ್ ಮತ್ತು ಆಡಿಯೋ ರೆಕಾರ್ಡ್‌ಗಳು ನನ್ನ ಬಳಿ ಇದೆ ಎಂದು ರಾಜ್ಯ ಗುತ್ತಿಗೆದಾರರ ಸಂಘದ ಕಾರ್ಯಾಧ್ಯಕ್ಷ ಮಂಜುನಾಥ್ ಕಮಿಷನ್ ಆರೋಪ ಮಾಡಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಮಂಜುನಾಥ್, ಚಿತ್ರದುರ್ಗದ ಶಾಸಕ ತಿಪ್ಪಾರೆಡ್ಡಿ ಭ್ರಷ್ಟಾಚಾರ ಮಾಡಿರುವ ಬಗ್ಗೆ ಆಡಿಯೋ ಇದೆ.ಚಿತ್ರದುರ್ಗದ 700 -800 ಕೋಟಿ ಕಾಮಗಾರಿ ಆಗಿದೆ.ಪಿಡಬ್ಲ್ಯೂಡಿ ಕೆಲಸ 15%, ಬಿಲ್ಡಿಂಗ್ 10 ಪರ್ಸೆಂಟ್ ತೆಗೆದುಕೊಳ್ಳುತ್ತಿದ್ದಾರೆ. ನನ್ನ ಹತ್ತಿರ ಬಿಲ್ಡಿಂಗ್ ಕೆಲಸ ಮಾಡಿದ್ದಾಗ 1 ಕೋಟಿಗೆ 10 ಪರ್ಸೆಂಟ್ ಪಡೆದಿದ್ದಾರೆ ಎಂದು ಆರೋಪಿಸಿದ್ದಾರೆ.

ಶಾಸಕ ತಿಪ್ಪಾರೆಡ್ಡಿಯವರಿಗೆ ಹಲವು ಕಾಮಗಾರಿಗಳಿಗೆ ಕಳೆದ ಒಂದು ವರ್ಷದಲ್ಲಿ 90 ಲಕ್ಷ ಕಮಿಷನ್​ ನೀಡಿದ್ದೇನೆ. ಇಷ್ಟೂ ಹಣವನ್ನು ನಗದು ರೂಪದಲ್ಲೇ ನೀಡಿದ್ದೇನೆ. ಒಂದು ಕೋಟಿ ಕಾಮಗಾರಿಗೆ 10 ಲಕ್ಷ ರೂಪಾಯಿ ನಂತರ ಕಮಿಷನ್ ಕೊಡಲಾಗಿದೆ ಎಂದು ಮಂಜುನಾಥ್ ಆರೋಪಿಸಿದ್ದಾರೆ

ಶಾಸಕ ತಿಪ್ಪಾರೆಡ್ಡಿ ವಿರುದ್ಧದ ಪರ್ಸೆಂಟೇಜ್ ಆರೋಪದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆರೋಗ್ಯ ಸಚಿವ ಡಾ.ಕೆ. ಸುಧಾಕರ್, ಚುನಾವಣೆ ಹೊಸ್ತಿಲಲ್ಲಿ ಇದು ಸರ್ವೆ ಸಾಮಾನ್ಯ ಎಂದು ಪ್ರತಿಕ್ರಿಯಿಸಿದ್ದಾರೆ.

ಟಾಪ್ ನ್ಯೂಸ್