ಬಿಜೆಪಿ ಶಾಸಕರದ್ದು ಎನ್ನಲಾದ ಮೋದಿ ಬಗ್ಗೆ ವ್ಯಂಗ್ಯವಾಗಿ ಮಾತನಾಡಿರುವ ಆಡಿಯೋ ವೈರಲ್; ಬಿಜೆಪಿಗರಿಗೆ ಮುಜುಗರ ತರಿಸಿದ ಆಡಿಯೋದಲ್ಲೇನಿದೆ?

ರಾಯಚೂರು ಜಿಲ್ಲೆಯ ಬಿಜೆಪಿ ಶಾಸಕ ಶಿವರಾಜ್ ಪಾಟೀಲ್ ಪ್ರಧಾನಿ ನರೇಂದ್ರ ಮೋದಿ ಅವರ ಬಗ್ಗೆ ಮಾತನಾಡಿದ್ದಾರೆ ಎನ್ನಲಾದ ಆಡಿಯೋ ಕ್ಲಿಪ್ ಭಾರೀ ವೈರಲ್ ಆಗಿದೆ.

ವೈರಲ್‌ ಆಗಿರುವ ಆಡಿಯೋ ಕ್ಲಿಪ್‌ನಲ್ಲಿ, ಪ್ರಧಾನಿ ಸೇರಿದಂತೆ ಯಾರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ. ನಾನು ಯಾವುದೇ ಗೂಂಡಾಗಳ ಮಾತನ್ನು ಕೇಳುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.

ಕ್ಲಿಪ್ನಲ್ಲಿ, ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಯಾರೊಬ್ಬರೂ ತಮ್ಮನ್ನು ಪ್ರಶ್ನಿಸಲು ಸಾಧ್ಯವಿಲ್ಲ ಮತ್ತು ತಾನು ಯಾವುದೇ ಗೂಂಡಾಗಳ ಮಾತನ್ನು ಕೇಳುವುದಿಲ್ಲ ಎಂದು ಪಾಟೀಲ್ ಹೇಳಿದ್ದಾರೆ.’ಮೋದಿ ಇಲ್ಲ, ಪಾದಿಯೂ ಇಲ್ಲ. ಇರೋದು ನಾನೊಬ್ಬನೇ ಶಿವರಾಜ್ ಪಾಟೀಲ್, ನಾನೇ ದೇವ್ರು, ನಾನಿದ್ರೆ ಜಗತ್ತು. ನಾನು ಯಾವುದೇ ವ್ಯಕ್ತಿಗಳ ಮಾತನ್ನು ಕೇಳುವುದಿಲ್ಲ.

ಮೋದಿಯವರ ರೈಟ್ ಹ್ಯಾಂಡ್ ಬಗ್ಗೆನೂ ನಾನೇನೂ ತಲೆಕೆಡಿಸಿಕೊಂಡಿಲ್ಲ.ನನಗೆ ಯಾವುದೇ ಬಲ ಅಥವಾ ಎಡ ಇಲ್ಲ.ನನ್ನ ಕೈಯಿ, ನನ್ನ ಕಾಲು. ನಾನು ಸಿಂಗಲ್ ಮ್ಯಾನ್ ಆರ್ಮಿ.

ನಾನೇ ಮೋದಿ, ನಾನೇ ಟ್ರಂಪ್, ಅವರು ನನ್ನನ್ನು ಆಟವಾಡಿಸಲು ಸಾಧ್ಯವಿಲ್ಲ, ಎಂದು ಆಡಿಯೋದಲ್ಲಿ ಹೇಳಲಾಗಿದೆ.

ಚುನಾವಣೆಯಲ್ಲಿ ಸೋತರೂ, ಗೆದ್ದರೂ ಪರವಾಗಿಲ್ಲ. ಜಗತ್ತಿನಲ್ಲಿ ಚಿಂತೆಯಿಲ್ಲದ ವ್ಯಕ್ತಿ ಇದ್ದರೆ ಅದು ಶಿವರಾಜ್ ಪಾಟೀಲ್.ನಾನು ದೇವರಿದ್ದಂತೆ, ನನ್ನ ಹುಡುಗರಿಗೆ ಪ್ರತಿ ದಿನ ನನ್ನ ಪಾದ ಮುಟ್ಟಿ ಆಶೀರ್ವಾದ ಪಡೆಯುವಂತೆ ಹೇಳಿದ್ದೇನೆ ಎಂದು ಮಾತನಾಡಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರ್ ಪತ್ನಿಗೆ ನಾನು ಕೆಲಸ ಕೊಡುತ್ತೇನೆ, ನಳಿನ್ ಕುಮಾರ್ ರಾಜೀನಾಮೆ ಕೊಡಲಿ- ಪ್ರತಿಭಾ ಕುಳಾಯಿ ಏನೆಲ್ಲಾ ಹೇಳಿದ್ರು?

ಮಂಗಳೂರು:ನಳಿನ್ ಕುಮಾರ್ ಕಟೀಲ್ ವಿರುದ್ಧ ಕೆಪಿಸಿಸಿ ಸಂಯೋಜಕಿ ಪ್ರತಿಭಾ ಕುಳಾಯಿ ವಾಗ್ದಾಳಿ ನಡೆಸಿದ್ದಾರೆ.

Developed by eAppsi.com