ಸಂದರ್ಶನದಲ್ಲಿ ಮಾತನಾಡುವಾಗ ದಲಿತ ಪದ ಬಳಕೆ; ಬಿಜೆಪಿ ಶಾಸಕನ ವಿರುದ್ಧ ಕೇಸ್ ದಾಖಲು

ಮುಂಬೈ:ಸುದ್ದಿ ವಾಹಿನಿಯೊಂದರಲ್ಲಿ ಮಾತನಾಡುವಾಗ ‘ದಲಿತ’ಪದ ಬಳಸಿದ ಆರೋಪದ ಮೇಲೆ ಬಿಜೆಪಿ ಶಾಸಕ ನಿತೇಶ್ ರಾಣೆ ವಿರುದ್ಧ ಮಹಾರಾಷ್ಟ್ರದ ನವಿ ಮುಂಬೈ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ ಎಂದು ಅಧಿಕಾರಿಯೊಬ್ಬರು ಸೋಮವಾರ ತಿಳಿಸಿದ್ದಾರೆ.

ಕಂಕವಲಿ ಶಾಸಕರ ವಿರುದ್ಧ ಕಳೆದ ವಾರ ವಕೀಲರೊಬ್ಬರು ದೂರು ದಾಖಲಿಸಿದ್ದರು.ದೂರುದಾರರು ಯೂಟ್ಯೂಬ್‌ನಲ್ಲಿ ಪ್ರಾದೇಶಿಕ ಸುದ್ದಿ ವಾಹಿನಿಯೊಂದಕ್ಕೆ ನಿತೇಶ್ ರಾಣೆ ಅವರು ನೀಡಿದ ಸಂದರ್ಶನದ ವೀಡಿಯೊವನ್ನು ನೋಡಿದ್ದಾರೆ.

ಅವರು ವಿಡಿಯೋದಲ್ಲಿ ‘ದಲಿತ’ ಪದವನ್ನು ಬಳಸಿದ್ದಾರೆ, ಅದರ ಬಳಕೆಯನ್ನು ಕೇಂದ್ರ ಸರ್ಕಾರವು ಆಗಸ್ಟ್ 7, 2018 ರಂದು ನಿಷೇಧಿಸಿದೆ ಎಂದು ಎಫ್‌ಐಆರ್ ನಲ್ಲಿ ತಿಳಿಸಲಾಗಿತ್ತು.

ಈ ಕುರಿತು ಸೆಕ್ಷನ್ 153A ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.153 ಬಿ (ದೇಶದ ಸಮಗ್ರತೆಯ ಬಗ್ಗೆ ಪೂರ್ವಗ್ರಹ ಮೂಡಿಸುವಂತಹ ಆಪಾದನೆಗಳು) ಹಾಗೂ 295 ಎ (ಯಾವುದೇ ವರ್ಗದ ಧರ್ಮ ಅಥವಾ ಧಾರ್ಮಿಕ ನಂಬಿಕೆಗಳನ್ನು ಉದ್ರೇಕಿಸುವ ಉದ್ದೇಶಪೂರ್ವಕ ಮತ್ತು ದುರುದ್ದೇಶಪೂರಿತ ಕೃತ್ಯ)ಗಳ ಅನ್ವಯ ಪ್ರಕರಣವನ್ನು ದಾಖಲಿಸಿಕೊಳ್ಳಲಾಗಿದೆ.

ಪೊಲೀಸರು ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ (ದೌರ್ಜನ್ಯ ತಡೆ) ಕಾಯ್ದೆಯನ್ನೂ ನಿತೇಶ್ ರಾಣೆ ವಿರುದ್ಧ ದಾಖಲಿಸಿದ್ದಾರೆ ಎಂದು ವರದಿಯಾಗಿದೆ.

ಟಾಪ್ ನ್ಯೂಸ್