ಮುಸ್ಲಿಂ ಯುವಕನ ಜೊತೆ ಬಿಜೆಪಿ ನಾಯಕನ ಪುತ್ರಿಯ ವಿವಾಹ, ವಿವಾದ ಸೃಷ್ಟಿ; ಏನಿದು ಬೆಳವಣಿಗೆ? ಇಲ್ಲಿದೆ ಡಿಟೇಲ್ಸ್..

ಮುಸ್ಲಿಂ ಯುವಕನ ಜೊತೆ ಬಿಜೆಪಿ ನಾಯಕನ ಪುತ್ರಿಯ ವಿವಾಹ,ವಿವಾದ ಸೃಷ್ಟಿ;ಏನಿದು ಬೆಳವಣಿಗೆ? ಇಲ್ಲಿದೆ ಡಿಟೇಲ್ಸ್..
ಉತ್ತರಾಖಂಡ;ಬಿಜೆಪಿ ಮುಖಂಡರೊಬ್ಬರ ಮಗಳ ಮದುವೆ ಕಾರ್ಡ್ ಸಾಮಾಜಿಕ ಜಾಲತಾಣದಲ್ಲಿ ಬಿರುಗಾಳಿ ಎಬ್ಬಿಸಿದೆ. ಉತ್ತರಾಖಂಡದ ಪೌರಿ ಪ್ರದೇಶದ ಬಿಜೆಪಿ ನಾಯಕ ಯಶಪಾಲ್ ಬೇನಮ್ ಅವರ ಮಗಳ ವಿವಾಹದ ಆಮಂತ್ರಣ ಪತ್ರಿಕೆ ವಿವಾದ ಎಬ್ಬಿಸಿದೆ.

ಬಿಜೆಪಿ ನಾಯಕನ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿರುವುದರಿಂದ ಜನಸಾಮಾನ್ಯರಿಂದ ಟೀಕೆಗೆ ಗುರಿಯಾಗಿದ್ದಾರೆ.

ವೆಡ್ಡಿಂಗ್ ಕಾರ್ಡ್‌ನ ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ.ಬಿಜೆಪಿಯ ಬೆಂಬಲಿಗರು ಮತ್ತು ವಿರೋಧಿಗಳು ಬೇನಾಮನ್ನು ಟೀಕಿಸಿದ್ದಾರೆ.

ಹಿಂದುತ್ವವಾದಿಗಳು ಮಾಜಿ ಶಾಸಕ ಮತ್ತು ಕೇಸರಿ ಪಕ್ಷವನ್ನು “ಡಬಲ್ ಸ್ಟಾಂಡರ್ಡ್” ಎಂದು ಆರೋಪಿಸಿ ಟ್ರೋಲ್ ಮಾಡುತ್ತಿದ್ದಾರೆ. ಇತರರು ಮದುವೆಯನ್ನು “ಲವ್ ಜಿಹಾದ್” ಎಂದು ಕರೆಯುತ್ತಿದ್ದಾರೆ, ಇದನ್ನು ಇತ್ತೀಚೆಗೆ ಬಿಡುಗಡೆಯಾದ ವಿವಾದಾತ್ಮಕ ಚಲನಚಿತ್ರ ದಿ ಕೇರಳ ಸ್ಟೋರೀಸ್‌ಗೆ ಹೋಲಿಸಿದ್ದಾರೆ.

ಬಿಜೆಪಿ ಆಡಳಿತವಿರುವ ರಾಜ್ಯಗಳು ‘ದಿ ಕೇರಳ ಸ್ಟೋರಿ’ಯಂತಹ ಚಲನಚಿತ್ರಗಳನ್ನು ತೆರಿಗೆ ಮುಕ್ತವಾಗಿ ಮಾಡುತ್ತಿವೆ ಆದರೆ ಇಲ್ಲಿ ಬಿಜೆಪಿ ನಾಯಕನ ಮಗಳು ಮುಸ್ಲಿಂ ವ್ಯಕ್ತಿಯನ್ನು ಮದುವೆಯಾಗುತ್ತಿದ್ದಾರೆ. ಇದು ಬಿಜೆಪಿಯ ದ್ವಂದ್ವ ನೀತಿಯಾಗಿದ್ದು, ಪಕ್ಷದ ಕಾರ್ಯಕರ್ತರು ಹತಾಶರಾಗುತ್ತಾರೆ ಎಂದು ಫೇಸ್‌ಬುಕ್ ನ ಕೆಲ ಬಳಕೆದಾರರು ಬರೆದಿದ್ದಾರೆ.

ಈ ಬಗ್ಗೆ ಇಂಡಿಯಾ ಟುಡೆಯೊಂದಿಗೆ ಮಾತನಾಡಿದ ಪೌರಿ ದೇವಾಲಯ ಸಮಿತಿಯ ಪದಾಧಿಕಾರಿಗಳು, “ಇದು ಕಳವಳಕಾರಿ ಸಂಗತಿಯಾಗಿದೆ. ಹಿಂದೂ ಕುಟುಂಬಗಳ ಹೆಣ್ಣುಮಕ್ಕಳನ್ನು ಇತರ ಧರ್ಮದ ಪುರುಷರೊಂದಿಗೆ ಮದುವೆ ಮಾಡುವುದು ಪ್ರಚಾರದ ಒಂದು ಭಾಗವಾಗಿದೆ.ಭಾರತದಲ್ಲಿ, ಮತಾಂತರದ ಕಾನೂನುಗಳನ್ನು ಬದಲಾಯಿಸಲಾಗುತ್ತಿದೆ, ಸರ್ಕಾರಿ ಆಸ್ತಿಗಳಲ್ಲಿ ಇತರ ಸಮುದಾಯದ ಜನರಿಗಾಗಿ ನಿರ್ಮಿಸಲಾದ ಗೋರಿಗಳನ್ನು ಕೇಂದ್ರವು ನೆಲಸಮ ಮಾಡುತ್ತಿದೆ, ಆದರೆ ಬಿಜೆಪಿಯ ಸ್ವಂತ ನಾಯಕರು ತಮ್ಮ ಹೆಣ್ಣುಮಕ್ಕಳನ್ನು ಮುಸ್ಲಿಂ ವ್ಯಕ್ತಿಯೊಂದಿಗೆ ಮದುವೆ ಮಾಡುತ್ತಿದ್ದಾರೆ ಎಂದು ಟೀಕಿಸಿದ್ದಾರೆ.

ವಿಶ್ವ ಹಿಂದೂ ಪರಿಷತ್ ಮತ್ತು ಬಜರಂಗದಳದ ಜನರು ಇದನ್ನು ವಿರೋಧಿಸಬೇಕು ಎಂದು ಹೇಳಿದರು.ಬಿಜೆಪಿ ಹಿಂದೂಗಳ ರಕ್ಷಣೆಗಾಗಿ ಇರುವ ಪಕ್ಷವಾಗಿದ್ದು, ಅಂತಹವರನ್ನು ಕೂಡಲೇ ಪಕ್ಷದಿಂದ ಹೊರಹಾಕಬೇಕು ಎಂದು ಅವರು ಹೇಳಿದ್ದಾರೆ.

ಮೇ 28 ರಂದು ಪೌರಿಯ ರೆಸಾರ್ಟ್‌ನಲ್ಲಿ ವಿವಾಹ ನಡೆಯಲಿದೆ. ಬೇನಾಮ್ ಪೌರಿ ಮುನ್ಸಿಪಲ್ ಕಾರ್ಪೊರೇಶನ್‌ನ ಅಧ್ಯಕ್ಷರಾಗಿದ್ದಾರೆ. ಅವರು ಮೊದಲು ಕಾಂಗ್ರೆಸ್‌ನಲ್ಲಿದ್ದರು ಮತ್ತು 2007 ರಲ್ಲಿ ಪೌರಿ ವಿಧಾನಸಭಾ ಕ್ಷೇತ್ರದಿಂದ ಸ್ವತಂತ್ರವಾಗಿ ಸ್ಪರ್ಧಿಸಿ ಶಾಸಕರಾಗಿದ್ದರು.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com