ಚಂಡೀಗಢ:ಹರಿಯಾಣ ಬಿಜೆಪಿ ನಾಯಕಿ ಸೋನಾಲಿ ಫೋಗಟ್ ಅವರ ಕುಟುಂಬ ಗೋವಾದಲ್ಲಿ ಆಕೆಯ ಸಾವಿನ ಬಗ್ಗೆ ಪ್ರಶ್ನೆಗಳನ್ನು ಎತ್ತಿದ್ದು,ಸಿಬಿಐ ತನಿಖೆಗೆ ಒತ್ತಾಯಿಸಿದೆ.
42 ವರ್ಷದ ಸೋನಾಲಿ ಫೋಗಟ್ ಸೋಮವಾರ ರಾತ್ರಿ ಶಂಕಿತ ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ.ಆಸ್ಪತ್ರೆಯಲ್ಲಿ ಆಕೆ ಮೃತಪಟ್ಟಿದ್ದಾಳೆ ಎಂದು ಘೋಷಿಸಲಾಯಿತು. ಸುದ್ದಿ ಸಂಸ್ಥೆ ಪಿಟಿಐ ಪ್ರಕಾರ ಪೊಲೀಸರು”ಅಸ್ವಾಭಾವಿಕ ಸಾವು” ಎಂದು ಪ್ರಕರಣ ದಾಖಲಿಸಿದ್ದಾರೆ.
ಆಕೆ ಹೃದಯಾಘಾತದಿಂದ ಸಾವನ್ನಪ್ಪಿದ್ದಾಳೆ ಎಂಬುದನ್ನು ಆಕೆಯ ಕುಟುಂಬ ಒಪ್ಪಿಕೊಳ್ಳಲಿಲ್ಲ.ಸೋನಾಲಿ ಫೋಗಟ್ ಸಹೋದರಿಗೆ ಮಾಡಿದ ಕೊನೆಯ ಕರೆಯಲ್ಲಿ ಏನೋ ಪಿತೂರಿ ಬೆಳವಣಿಗೆ ನಡೆಯುವ ಬಗ್ಗೆ ಫೋನ್‌ನಲ್ಲಿ ಹೇಳಿದ್ದರು ಎನ್ನಲಾಗಿದೆ.
ನನ್ನ ಸಹೋದರಿಗೆ ಹೃದಯಾಘಾತವಾಗುವುದಿಲ್ಲ.ಅವರು ತುಂಬಾ ಫಿಟ್ ಆಗಿದ್ದರು.ಸಿಬಿಐನಿಂದ ಸೂಕ್ತ ತನಿಖೆಗೆ ನಾವು ಒತ್ತಾಯಿಸುತ್ತೇವೆ.ಅವರು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ ಎಂಬುದನ್ನು ನನ್ನ ಕುಟುಂಬ ಒಪ್ಪಿಕೊಳ್ಳಲು ಸಿದ್ಧರಿಲ್ಲ.ಅವರಿಗೆ ಅಂತಹ ಯಾವುದೇ ವೈದ್ಯಕೀಯ ಸಮಸ್ಯೆ ಇರಲಿಲ್ಲ ಎಂದು ಆಕೆಯ ಸಹೋದರಿ ರಾಮನ್ ಸುದ್ದಿಗೆ ತಿಳಿಸಿದ್ದಾರೆ.
ಅವರು ಸಾವಿನ ಹಿಂದಿನ ಸಂಜೆ ನನಗೆ ಕರೆ ಮಾಡಿದ್ದರು. ಅವಳು ವಾಟ್ಸಾಪ್‌ನಲ್ಲಿ ಮಾತನಾಡಲು ಬಯಸುವುದಾಗಿ ಹೇಳಿದಳು ಮತ್ತು ಏನೋ ಪಿತೂರಿ ನಡೆಯುತ್ತಿದೆ ಎಂದು ಹೇಳಿದಳು.ನಂತರ,ಅವಳು ಕರೆಯನ್ನು ಕಟ್ ಮಾಡಿ ನಂತರ ಪಿಕ್ ಮಾಡಲಿಲ್ಲ ಎಂದು ಹೇಳಿದ್ದಾರೆ.
ಗುಂಪಿನೊಂದಿಗೆ ಗೋವಾಕ್ಕೆ ತೆರಳಿದ್ದ ಸೋನಾಲಿ ಫೋಗಟ್ ಅವರು ಅಸ್ವಸ್ಥರಾಗಿದ್ದರು ಎಂದ ನಂತರ ಆಸ್ಪತ್ರೆಗೆ ಕರೆದೊಯ್ಯಲಾಯಿತು.
ಸೋನಾಲಿ ಫೋಗಟ್,ಕಂಟೆಂಟ್ ಕ್ರಿಯೇಟರ್ ಆಗಿದ್ದು,ತನ್ನ ಟಿಕ್‌ಟಾಕ್ ವೀಡಿಯೊಗಳೊಂದಿಗೆ ಖ್ಯಾತಿಗೆ ಬಂದಿದ್ದರು. 2006 ರಲ್ಲಿ ಟಿವಿ ನಿರೂಪಕಿಯಾಗಿ ವೃತ್ತಿಗೆ ಪಾದಾರ್ಪಣೆ ಮಾಡಿದರು.
ಅವರು 2016 ರಲ್ಲಿ ಟಿವಿ ಶೋ ಮೂಲಕ ತಮ್ಮ ನಟನೆಗೆ ಪಾದಾರ್ಪಣೆ ಮಾಡಿದ್ದರು.ಅವರು ರಿಯಾಲಿಟಿ ಶೋ ಬಿಗ್ ಬಾಸ್‌ನ 2020 ಆವೃತ್ತಿಯಲ್ಲಿ ಸ್ಪರ್ಧಿಯಾಗಿದ್ದರು.