ವಿದ್ಯಾರ್ಥಿ ಮೇಲೆ ಹಲ್ಲೆ ಮಾಡಿದ ಬಿಜೆಪಿ ಮುಖ್ಯಸ್ಥನ ಪುತ್ರ;ವಿಡಿಯೋ ವೈರಲ್

ಹೈದರಾಬಾದ್‌;ಖಾಸಗಿ ಕಾಲೇಜಿನಲ್ಲಿ ಸಹ ವಿದ್ಯಾರ್ಥಿಯ ಮೇಲೆ ತೆಲಂಗಾಣ ಬಿಜೆಪಿ ಮುಖ್ಯಸ್ಥ ಬಂಡಿ ಸಂಜಯ್ ಕುಮಾರ್ ಅವರ ಪುತ್ರ ಹಲ್ಲೆ ನಡೆಸಿರುವ ವಿಡಿಯೋ ವೈರಲ್ ಆಗಿದೆ.

ಹಲ್ಲೆಗೆ ಸಂಬಂಧಿಸಿ ಇದೀಗ ಬಂಡಿ ಭಾಗೀರಥ್ ಸಾಯಿ ವಿರುದ್ಧ ಪ್ರಕರಣ ದಾಖಲಾಗಿದೆ. ಮಹೀಂದ್ರಾ ವಿಶ್ವವಿದ್ಯಾನಿಲಯವು ನೀಡಿದ ದೂರಿನ ಆಧಾರದ ಮೇಲೆ ಬಂಡಿ ಭಾಗೀರಥ್ ಸಾಯಿ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ಕಾಲೇಜು ಆವರಣದಲ್ಲಿ ಶ್ರೀರಾಮ್‌ ಎಂಬ ವಿದ್ಯಾರ್ಥಿಗೆ ಭಾಗೀರಥ್ ಪದೇ ಪದೇ ಕಪಾಳಕ್ಕೆ ಹೊಡೆಯುತ್ತಿದ್ದು, ಈ ವೇಳೆ ಭಗೀರಥನ ಸ್ನೇಹಿತನು ಕೂಡ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಹಲ್ಲೆಯ ವಿಡಿಯೋ ವೈರಲ್ ಬಳಿಕ ವ್ಯಾಪಕ‌ ಟೀಕೆಗೆ ಕಾರಣವಾಗಿದೆ.

ಟಾಪ್ ನ್ಯೂಸ್