ಬಿಜೆಪಿ ರಾಜ್ಯ ಉಪಾಧ್ಯಕ್ಷರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್; ದೂರು

ಬಿಜೆಪಿ ರಾಜ್ಯ ಉಪಾಧ್ಯಕ್ಷರದ್ದು ಎನ್ನಲಾದ ಅಶ್ಲೀಲ ವಿಡಿಯೋ ವೈರಲ್

ಮುಂಬೈ: ಮಹಾರಾಷ್ಟ್ರ ಬಿಜೆಪಿ ರಾಜ್ಯ ಉಪಾಧ್ಯಕ್ಷ ಹಾಗೂ ಮಾಜಿ ಲೋಕಸಭಾ ಸದಸ್ಯ ಕಿರಿಟ್ ಸೋಮಯ್ಯ ಅವರದ್ದು ಎನ್ನಲಾದ ಅಶ್ಲೀಲ ವಿಡಿಯೊ ವೈರಲ್ ಆಗಿದ್ದು ಮಹಾರಾಷ್ಟ್ರದ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ.

ವಿಡಿಯೋ ವೈರಲ್ ಬೆನ್ನಲ್ಲೇ ಕಿರಿಟ್ ಸೋಮಯ್ಯ ಅವರ ಬಗ್ಗೆ ಟೀಕೆಗಳು ಕೇಳಿ ಬಂದಿವೆ.

ಕಿರಿಟ್ ಸೋಮಯ್ಯ ಅವರು, ಈ ವಿಡಿಯೊ ನನ್ನದಲ್ಲ. ನನ್ನ ಹೆಸರಿನಲ್ಲಿ ತಿರುಚಿದ ವಿಡಿಯೊಗಳನ್ನು ಬಿತ್ತರಿಸಲಾಗಿದೆ. ನಾನು ಯಾವುದೇ ಮಹಿಳೆ ಅಥವಾ ಮಹಿಳೆಯರಿಗೆ ಲೈಂಗಿಕ ಕಿರುಕುಳ ನೀಡಿಲ್ಲ. ವಿಡಿಯೊ ಸತ್ಯಾಸತ್ಯತೆ ಬಗ್ಗೆ ತನಿಖೆ ಮಾಡಿ ಕ್ರಮ ಜರುಗಿಸಬೇಕು ಎಂದು ಮಹಾರಾಷ್ಟ್ರದ ಉಪಮುಖ್ಯಮಂತ್ರಿಯೂ ಆಗಿರುವ ಗೃಹ ಸಚಿವ ದೇವೇಂದ್ರ ಫಡಣವೀಸ್ ಅವರಿಗೆ ಟ್ವೀಟ್ ಮೂಲಕ ದೂರು ನೀಡಿದ್ದಾರೆ.

ವಿಡಿಯೊದಲ್ಲಿ ಕಿರಿಟ್ ಸೋಮಯ್ಯ ಎನ್ನಲಾದ ವ್ಯಕ್ತಿ ಮಹಿಳೆಯೊಬ್ಬರ ಜೊತೆ ಅಶ್ಲೀಲವಾಗಿ ಮಾತನಾಡುತ್ತಾ ಅಶ್ಲೀಲ ಹಾವಭಾವ ಪ್ರದರ್ಶಿಸುತ್ತಾ, ಬೆತ್ತಲೆ ದೇಹ ಪ್ರದರ್ಶನ ಮಾಡಿರುವುದು ಕಂಡು ಬಂದಿದೆ.ಇದನ್ನು ಸ್ಥಳೀಯ ಚಾನಲ್ ವೊಂದು ಪ್ರಸಾರ ಮಾಡಿದೆ ಎನ್ನಲಾಗಿದೆ.

ಟಾಪ್ ನ್ಯೂಸ್