ಬಿಜೆಪಿ ಪ್ರಚಾರದ ಜೀಪ್ ಬೈಕ್ ಗೆ ಢಿಕ್ಕಿ; ಯುವಕ ಮೃತ್ಯು

ಬಂಟ್ವಾಳ:ಜೀಪ್ ಗೆ ಬೈಕ್ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಸ್ಥಳದಲ್ಲೆ ಮೃತಪಟ್ಟ ಘಟನೆ ಮೆಲ್ಕಾರ್ ಸಮೀಪದ ನರಹರಿ ಎಂಬಲ್ಲಿ ನಡೆದಿದೆ‌.

ಬೆಳ್ತಂಗಡಿ ಮೂಲದ ವಿಜಿತ್ ಮೃತಪಟ್ಟ ಯುವಕ. ಬಂಟ್ವಾದಲ್ಲಿ ನಡೆಯುವ ಬಿಜೆಪಿಯ ಪಾದಯಾತ್ರೆಯ ಪ್ರಚಾರಕ್ಕೆ ಆಗಮಿಸಿದ್ದ ತೆಲಂಗಾಣ ದಾಖಲೆಯ ವಾಹನಕ್ಕೆ ನರಹರಿ ತಿರುವಿನಲ್ಲಿ ಬೈಕ್ ಸ್ಕಿಡ್ ಆಗಿ ಢಿಕ್ಕಿಯಾಗಿದೆ ಎನ್ನಲಾಗಿದೆ.

ಇನ್ನು ಗಂಭೀರವಾಗಿ ಗಾಯಗೊಂಡ ಬೈಕ್ ಸವಾರನನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾನೆ ಎಂದು ತಿಳಿದು ಬಂದಿದೆ.

ಟಾಪ್ ನ್ಯೂಸ್