ಬಿಜೆಪಿ- ಜೆಡಿಎಸ್ ಮೈತ್ರಿ; ಸಿಎಂ ಇಬ್ರಾಹೀಂ ಹೇಳಿದ್ದೇನು ಗೊತ್ತಾ?

ಬೆಂಗಳೂರು:ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಜೊತೆ ಜೆಡಿಎಸ್ ಮೈತ್ರಿ ಬಗ್ಗೆ ಯಡಿಯೂರಪ್ಪ ಹೇಳಿಕೆ ಬೆನ್ನಲ್ಲೇ ರಾಜ್ಯದಲ್ಲಿ ಮೈತ್ರಿ ಕುರಿತು ಭಾರೀ ಚರ್ಚೆ ನಡೆಯುತ್ತಿದೆ.

ನಗರದಲ್ಲಿಂದು ಪತ್ರಿಕಾ ಗೋಷ್ಟಿಯಲ್ಲಿ ಮಾತಾಡಿದ ಸಿಎಂ ಇಬ್ರಾಹೀಂ, ತಾವು ಕಾಂಗ್ರೆಸ್ ಬಿಟ್ಟು ಜೆಡಿಎಸ್ ಪಕ್ಷ ಸೇರಿದ್ದಕ್ಕೆ ಯಾವುದೇ ಕೊರಗು ಪಶ್ಚಾತ್ತಾಪ ಇಲ್ಲ. ಮಂತ್ರಿಯಾಗಲಿಲ್ಲ ಅನ್ನೋ ಕೊರಗಿಗಿಂತ ಹೆಚ್ಚು ಕಷ್ಟ ಕಾಲದಲ್ಲಿ ಹೆಚ್ ಡಿ ದೇವೇಗೌಡ ಮತ್ತು ಹೆಚ್ ಡಿ ಕುಮಾರಸ್ವಾಮಿ ಜೊತೆ ನಿಂತುಕೊಂಡ ತೃಪ್ತಿ ಇದೆ ಎಂದು ಹೇಳಿದರು.

92 ವರ್ಷದ ದೇವೇಗೌಡರ ಜೊತೆ 42 ವರ್ಷದ ಸ್ನೇಹ-ಬಾಂಧವ್ಯ ಇದೆ ಎಂದು ಹೇಳಿದ ಅವರು ಬಿಜೆಪಿ ಜೊತೆ ಮೈತ್ರಿ ಮಾಡಿಕೊಳ್ಳುವ ಬಗ್ಗೆ ಸ್ಪಷ್ಟ ನಿಲುವು ಪ್ರಕಟಿಸಲಿಲ್ಲ ಎಂದು ಹೇಳಿದ್ದಾರೆ.

ಮೈತ್ರಿ ಬಗ್ಗೆ ಅಂತಿಮವಾಗಿಲ್ಲ. ಎರಡು ಪಕ್ಷಗಳ ನಾಯಕರಿಗಿಂತ ಮಾಧ್ಯಮದವರಿಗೆ ಹೆಚ್ಚು ಕುತೂಹಲವಿದ್ದಂತಿದೆ ಎಂದು ಇದೇ ವೇಳೆ ಅವರು ಹೇಳಿದ್ದಾರೆ.

ಟಾಪ್ ನ್ಯೂಸ್