ಮಧ್ಯಪ್ರದೇಶ;ಬಿಜೆಪಿಯ ಮಾಜಿ ಕೌನ್ಸಿಲರ್ ತನ್ನ ಕುಟುಂಬದ ಮೂವರು ಸದಸ್ಯರೊಂದಿಗೆ ಆತ್ಮಹತ್ಯೆ ಮಾಡಿಕೊಂಡ ಘಟನೆ
ವಿದಿಶಾ ಜಿಲ್ಲೆಯಲ್ಲಿ ನಡೆದಿದೆ.
ಸಂಜೀವ್ ಮಿಶ್ರಾ (45), ಅವರ ಪತ್ನಿ ನೀಲಂ ಮಿಶ್ರಾ, ಇಬ್ಬರು ಪುತ್ರರಾದ ಅನ್ಮೋಲ್ ಮತ್ತು ಸಾರ್ಥಕ್ ಮಿಶ್ರಾ ಆತ್ಮಹತ್ಯೆ ಮಾಡಿಕೊಂಡವರು.
ಸಂಜೀವ್ ಮಿಶ್ರಾ ಮಾಜಿ ಬಿಜೆಪಿ ಕಾರ್ಪೊರೇಟರ್ ಆಗಿದ್ದು, ಬ್ರಾಸ್ ಮಿಲ್ ಬಳಿ ‘ಜನತಾ ಭೋಜ್ನಾಲಯ’ ಎಂಬ ರೆಸ್ಟೋರೆಂಟ್ ನಡೆಸುತ್ತಿದ್ದರು.
ಸಂಜೀವ್ ಅವರ ಮಗ ‘ಮಸ್ಕ್ಯುಲರ್ ಡಿಸ್ಟ್ರೋಫಿ’ ಎಂಬ ಅನುವಂಶಿಕ ಕಾಯಿಲೆಯಿಂದ ಬಳಲುತ್ತಿದ್ದು, ಇದಕ್ಕೆ ಐದು ವರ್ಷಗಳಿಂದ ಚಿಕಿತ್ಸೆ ನೀಡಿದ್ದರು.ಆದರೆ ಗುಣವಾಗಿರಲಿಲ್ಲ.ಇದರಿಂದಾಗಿ ಸಂಜೀವ್ ಮಗನಿಗೆ ಚಿಕಿತ್ಸೆ ಕೊಡಲು ಸಾಧ್ಯವಾಗುತ್ತಿಲ್ಲ ಎಂದು ಆತ್ಮಹತ್ಯೆ ನಿರ್ಧಾರಕ್ಕೆ ಬಂದಿದ್ದಾರೆ.