ನವದೆಹಲಿ; 2021-22ರ ಆರ್ಥಿಕ ವರ್ಷದಲ್ಲಿ ಬಿಜೆಪಿಯ ಆಸ್ತಿ 21.17% ರಷ್ಟು ಹೆಚ್ಚಳವಾಗಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ADR) ವರದಿ ತಿಳಿಸಿದೆ.
ಬಿಜೆಪಿ ಬಳಿ ಒಟ್ಟು 6,046.81 ಕೋಟಿ ಆಸ್ತಿ ಇದ್ದು 2021–22ರಲ್ಲಿ ಅತೀ ಶ್ರೀಮಂತ ಪಕ್ಷವಾಗಿ ಬಿಜೆಪಿ ಹೊರಹೊಮ್ಮಿದೆ ಎಂದು ಅಸೋಸಿಯೇಷನ್ ಫಾರ್ ಡೆಮಾಕ್ರಟಿಕ್ ರಿಫಾರ್ಮ್ಸ್ (ಎಡಿಆರ್) ಬಿಡುಗಡೆ ಮಾಡಿದ ವರದಿಯಲ್ಲಿ ತಿಳಿಸಲಾಗಿದೆ.
ದೇಶದ ಎಂಟು ರಾಷ್ಟ್ರೀಯ ಪಕ್ಷಗಳ ಒಟ್ಟು ಆಸ್ತಿಯ ಮೌಲ್ಯ 8,829.15 ಕೋಟಿ. ಈ ಮೊತ್ತದಲ್ಲಿ ಬಿಜೆಪಿಯದ್ದೇ ಹೆಚ್ಚಿನ ಪ್ರಮಾಣವಾಗಿದೆ. ಒಟ್ಟು ಆದಾಯ ಶೇ 69ರಷ್ಟಿದೆ.
ಎಂಟು ರಾಷ್ಟ್ರೀಯ ಪಕ್ಷಗಳು ಘೋಷಿಸಿದ ಆಸ್ತಿ ಕುರಿತು ಎಡಿಆರ್ ವಿಶ್ಲೇಷಣೆಯನ್ನು ಮಾಡಿದ್ದು, ಬಿಜೆಪಿ, ಕಾಂಗ್ರೆಸ್, ಎನ್‌ಸಿಪಿ, ಬಿಎಸ್‌ಪಿ, ಸಿಪಿಐ, ತೃಣಮೂಲ ಕಾಂಗ್ರೆಸ್, ನ್ಯಾಷನಲ್ ಪೀಪಲ್ಸ್ ಪಾರ್ಟಿ ಸೇರಿ ವಿವಿಧ ಪಕ್ಷಗಳು ಘೋಷಿಸಿದ ಅಂಕಿ-ಅಂಶಗಳನ್ನು ವಿಶ್ಲೇಷಿಸಿ ಎಡಿಆರ್ ವರದಿಯನ್ನು ಸಿದ್ದಪಡಿಸಿದೆ.