ಹುಟ್ಟು ಹಬ್ಬದ ಮುನ್ನಾದಿನ ಬಾಲಕ ಸಾವು, ಮೃತದೇಹದ ಪಕ್ಕದಲ್ಲಿ ಕೇಕ್ ಇಟ್ಟು ಕತ್ತರಿಸಿದ ಪೋಷಕರು; ಸಾವಿನ ಮನೆಯಲ್ಲಿ ಕಣ್ಣೀರ ಹುಟ್ಟುಹಬ್ಬ!

ಹುಟ್ಟು ಹಬ್ಬದ ಮುನ್ನಾದಿನ ಬಾಲಕ ಸಾವು, ಮೃತದೇಹದ ಪಕ್ಕದಲ್ಲಿ ಕೇಕ್ ಇಟ್ಟು ಕತ್ತರಿಸಿದ ಪೋಷಕರು; ಸಾವಿನ ಮನೆಯಲ್ಲಿ ಕಣ್ಣೀರ ಹುಟ್ಟುಹಬ್ಬ!

ಅದಿಲಾಬಾದ್(ತೆಲಂಗಾಣ): ತೆಲಂಗಾಣದ ಆಸಿಫಾಬಾದ್ ಜಿಲ್ಲೆಯ ಬಾಬಾಪುರ್ ಗ್ರಾಮದಲ್ಲಿ 16 ವರ್ಷದ ಬಾಲಕನೊಬ್ಬ ತನ್ನ ಹುಟ್ಟುಹಬ್ಬಕ್ಕೆ ಒಂದು ದಿನ ಮುಂಚಿತವಾಗಿ ಹೃದಯಾಘಾತದಿಂದ ಸಾವನ್ನಪ್ಪಿದ್ದಾನೆ.

ದುಃಖಿತ ಪೋಷಕರು ಅವನ ಆಸೆಯನ್ನು ಪೂರೈಸಲು ಮೃತದೇಹದ ಪಕ್ಕದಲ್ಲಿಟ್ಟು ಕೇಕ್ ಕತ್ತರಿಸಿದ್ದಾರೆ. ಮೇ 19ರಂದು ಬಾಲಕ ಸಚಿನ್ ಗೆ ಹುಟ್ಟುಹಬ್ಬವಿತ್ತು, ಹೊಟ್ಟೆನೋವಿಗೆ ಚಿಕಿತ್ಸೆ ಪಡೆಯುತ್ತಿದ್ದ ಬಾಲಕ ಗುರುವಾರ ಸಂಜೆ ಖಾಸಗಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಪೋಷಕರು ಸಚಿನ್‌ನ ಶವವನ್ನು ಮನೆಗೆ ತಂದರು. ಶುಕ್ರವಾರ 12 ಗಂಟೆಗೆ ಜನ್ಮದಿನವನ್ನು ಆಚರಿಸಿದರು. ಗುಣವಂತ್ ರಾವ್ ಮತ್ತು ಲಲಿತಾ, ಬಾಲಕನ ಪೋಷಕರು ಮತ್ತು ಸಂಬಂಧಿಕರು ಕೇಕ್ ವ್ಯವಸ್ಥೆ ಮಾಡಿದರು.

ಬಾಲಕನ ಮೃತದೇಹದ ಪಕ್ಕದಲ್ಲಿ ಕೇಕ್ ಕತ್ತರಿಸುವ ಮೂಲಕ ಹುಟ್ಟುಹಬ್ಬವನ್ನು ಆಚರಿಸಿದರು. ಅವರು ಆತನಿಗಾಗಿ ಪ್ರಾರ್ಥಿಸಿದರು. ಕೇಕ್ ಕತ್ತರಿಸುವಾಗ ಮೃತ ಬಾಲಕನ ಕೈ ಹಿಡಿದರು.ಬಾಲಕನ ದೇಹವು ಹಾಸಿಗೆಯ ಮೇಲೆ ನಿಶ್ಚಲವಾಗಿ ಮಲಗಿದ್ದರೂ ಸಹ ಅವರು ಚಪ್ಪಾಳೆ ತಟ್ಟಿದರು ಮತ್ತು ಹುಟ್ಟುಹಬ್ಬದ ಶುಭಾಶಯ ಹಾಡನ್ನು ಹಾಡಿದರು.

ಬಳಿಕ ಶುಕ್ರವಾರ ಬಾಲಕನ ಅಂತ್ಯಕ್ರಿಯೆ ನಡೆಸಲಾಯಿತು. ಮಂಚೇರಿಯಲ್ ಆಸ್ಪತ್ರೆಗೆ ದಾಖಲಿಸಲಾಗಿದ್ದ ಬಾಲಕ ಅನಾರೋಗ್ಯದಿಂದ ಮೃತಪಟ್ಟಿದ್ದ ಎಂದು ಕುಟುಂಬದವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

ಹಿಂದೂ ಯುವತಿಯನ್ನು “ಕೇರಳ ಸ್ಟೋರಿ” ವೀಕ್ಷಿಸಲು ಕರೆದೊಯ್ದ ಸಂಸದೆ ಪ್ರಜ್ಞಾ ಸಿಂಗ್; ಆಕೆ ಸಿನಿಮಾ ನೋಡಿದ ಮರುದಿನವೇ ತನ್ನ ಮುಸ್ಲಿಂ ಪ್ರೇಮಿಯೊಂದಿಗೆ ಪರಾರಿ!- ವರದಿ

ಭೋಪಾಲ್‌; 19 ವರ್ಷದ ಹಿಂದೂ ಸಮುದಾಯದ ನರ್ಸಿಂಗ್ ವಿದ್ಯಾರ್ಥಿನಿ ತನ್ನ ನಿಗದಿಯಾಗಿದ್ದ ಮದುವೆಗೆ

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com