9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆ: ಶಾಕಿಂಗ್ ಸುದ್ದಿ

9 ತಿಂಗಳ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯಾದ ಘಟನೆ ಜಾರ್ಖಾಂಡ್ ನ ರಾಜೇಂದ್ರ ವೈದ್ಯಕೀಯ ವಿಜ್ಞಾನ ಸಂಸ್ಥೆ ನಡೆದಿದೆ.

ವೈದ್ಯರು 9 ವರ್ಷದ ಮಗುವಿನಲ್ಲಿ ಹಕ್ಕಿ ಜ್ವರ ಪತ್ತೆಯನ್ನು ದೃಢಪಡಿಸಿದ್ದಾರೆ.9 ತಿಂಗಳ ಮಗುವನ್ನು ಜ್ವರ,ಕಫ ಮತ್ತು ಉಸಿರಾಟದ ತೊಂದರೆಯಿಂದ ರಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿತ್ತು.

ಡಾ.ರಾಜೀವ್ ಮಿಶ್ರಾ ಈ ಕುರಿತು ಮಾಹಿತಿಯನ್ನು ನೀಡಿದ್ದು, ಮಗುವಿನ ಮೂಗಿನ ದ್ರವವನ್ನು ಪರೀಕ್ಷೆಗೆ ಕಳುಹಿಸಲಾಗಿದ್ದು ಹಕ್ಕಿಜ್ವರ ದೃಢಪಟ್ಟಿದೆ ಎಂದು ಹೇಳಿದ್ದಾರೆ.

ಇದು ಈ ಬಾರಿಯ ಮೊದಲ ಹಕ್ಕಿ ಜ್ವರದ ಪ್ರಕರಣ ಎಂದು ವೈದ್ಯರಾದ ಡಾ.ರಾಜೀವ್ ಮಿಶ್ರಾ ಹೇಳಿದ್ದು, ಮಗುವಿಗೆ ಚಿಕಿತ್ಸೆ ಮುಂದುವರಿಸಲಾಗಿದೆ.ಕೋವಿಡ್ ನಂತೆ ಈ ಪ್ರಕರಣದಲ್ಲಿ ಮುನ್ನೆಚ್ಚರಿಕೆ ವಹಿಸಲಾಗಿದೆ ಎಂದು ವೈದ್ಯರು ದೃಢಪಟಿಸಿದ್ದಾರೆ.ಮಗುವನ್ನು ಕ್ವಾರೆಂಟೈನ್ ನಲ್ಲಿ ಇಡಲಾಗಿದೆ.ಇತರರು ಹಕ್ಕಿ ಜ್ವರ ಸೋಂಕಿತ ಮಗುವಿನ ಸಂಪರ್ಕಕ್ಕೆ ಬರದಂತೆ ಎಚ್ಚರಿಕೆ ವಹಿಸಲಾಗಿದೆ.

ಟಾಪ್ ನ್ಯೂಸ್