ಕಾಂಗ್ರೆಸ್ ಹೇಳಿದೆ ಬಿಲ್ ಕಟ್ಟಲ್ಲ ಎಂದು ಕರೆಂಟ್ ಬಿಲ್ ವಸೂಲಿಗೆ ಹೋದ ಲೈನ್ ಮ್ಯಾನ್ ಗೆ ಚಪ್ಪಲಿಯಿಂದ ಹಲ್ಲೆ; 6 ತಿಂಗಳಿನಿಂದ ಬಿಲ್ ಕಟ್ಟದ ಆಸಾಮಿಯಿಂದ ಕೃತ್ಯ!

ಕಾಂಗ್ರೆಸ್ ಹೇಳಿದೆ ಬಿಲ್ ಕಟ್ಟಲ್ಲ ಎಂದು ಕರೆಂಟ್ ಬಿಲ್ ವಸೂಲಿಗೆ ಹೋದ ಲೈನ್ ಮ್ಯಾನ್ ಗೆ ಚಪ್ಪಲಿಯಿಂದ ಹಲ್ಲೆ; 6 ತಿಂಗಳಿನಿಂದ ಬಿಲ್ ಕಟ್ಟದ ಆಸಾಮಿಯಿಂದ ಕೃತ್ಯ!

ಕೊಪ್ಪಳ;ವಿದ್ಯುತ್​ ಬಿಲ್​ ವಸೂಲಿಗೆ ಬಂದ ಲೈನ್​ಮ್ಯಾನ್​ ಮೇಲೆ ವ್ಯಕ್ತಿಯೊಬ್ಬ ಅವಾಚ್ಯ ಶಬ್ದದಿಂದ ನಿಂದಿಸಿ ಚಪ್ಪಲಿಯಿಂದ ಹೊಡೆದು ಹಲ್ಲೆ ನಡೆಸಿರುವ ಆರೋಪ
ಕುಕನಪಲ್ಲಿ ಗ್ರಾಮದಿಂದ ವರದಿಯಾಗಿದೆ.

ಕಳೆದ ಆರು ತಿಂಗಳಿನಿಂದ ಚಂದ್ರಶೇಖರಯ್ಯ ಎಂಬುವವರು ವಿದ್ಯುತ್​ ಬಿಲ್ ಬಾಕಿ ಉಳಿಸಿಕೊಂಡಿದ್ದರು.ಬಿಲ್​ ಪಾವತಿ ಮಾಡದ ಹಿನ್ನೆಲೆಯಲ್ಲಿ ಬಿಲ್​ ವಸೂಲಾತಿಗೆಂದು ಅವರ ಮನೆಗೆ ಲೈನ್​ಮ್ಯಾನ್​ ಮಂಜುನಾಥ್​ ಎಂಬುವರು ತೆರಳಿದ್ದರು.

ಬಿಲ್​ ಪಾವತಿಸುವಂತೆ ಚಂದ್ರಶೇಖರಯ್ಯ ಅವರನ್ನು ಲೈನ್ ಮ್ಯಾನ್ ಕೇಳಿದಾಗ, ಆತ ನಾನು ಯಾವುದೇ ಕಾರಣಕ್ಕೂ ವಿದ್ಯುತ್ ಬಿಲ್​ ಕಟ್ಟುವುದಿಲ್ಲ. ವಿದ್ಯುತ್​ ಉಚಿತ ಅಂತ ಹೇಳಿದ್ದಾರೆ ಎಂದು ವಾಗ್ವಾದಕ್ಕೆ ಇಳಿದಿದ್ದಾನೆ.

ಸರ್ಕಾರ ಇನ್ನು ಅಧಿಕೃತವಾಗಿ ಜಾರಿ ಮಾಡಿಲ್ಲ. ಜಾರಿ ಮಾಡಿದ ಬಳಿಕ ನೋಡೋಣ, ಸದ್ಯಕ್ಕೆ ಹಳೆಯ ಬಿಲ್​ ನ್ನು ಪಾವತಿಸಿ ಎಂದು ಮಂಜುನಾಥ್​ ಕೇಳಿದ್ದಾರೆ.ಈ ವೇಳೆ
ಚಂದ್ರಶೇಖರಯ್ಯ ಅವಾಚ್ಯ ಶಬ್ದಗಳಿಂದ ಮಂಜುನಾಥ್​ರನ್ನು ನಿಂದಿಸಿದ್ದಾರೆ.

ಬಳಿಕ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಮಂಜುನಾಥ್​ ಮೇಲೆ ಚಂದ್ರಶೇಖರಯ್ಯ ಚಪ್ಪಲಿಯಿಂದ ಹಲ್ಲೆ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ.

ಹಲ್ಲೆ ನಡೆಸಿದ ಚಂದ್ರಶೇಖರಯ್ಯ ವಿರುದ್ಧ ಮಂಜುನಾಥ್​ ಮುನಿರಾಬಾದ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

ರಾಜ್ಯದಲ್ಲಿ ಕಾಂಗ್ರೆಸ್​ ಅಧಿಕಾರಕ್ಕೆ ಬಂದ ಬಳಿಕ 200 ಯುನಿಟ್ ವಿದ್ಯುತ್​ ಉಚಿತ ನೀಡುವುದಾಗಿ ಭರವಸೆ ನೀಡಿದ್ದರು.ನೂತನ ಸಿದ್ದರಾಮಯ್ಯ ಸರಕಾರ ಈ ಗ್ಯಾರೆಂಟಿಗೆ ಸಂಪುಟದಲ್ಲಿ ಒಪ್ಪಿಗೆ ನೀಡಿದೆ.ಇದರ ಜಾರಿ ಪ್ರಕ್ರಿಯೆ ಮುಂದುವರಿದಿದೆ.

ಈ‌ ಮಧ್ಯೆ 6 ತಿಂಗಳು ಬಿಲ್‌ಕಟ್ಟದೆ ಈಗ ಲೈನ್ ಮ್ಯಾನ್ ಗೆ ವ್ಯಕ್ತಿ ಹಲ್ಲೆ ನಡೆಸಿರುವುದು ದುರ್ವರ್ತನೆಯೇ ಸರಿ.

ಟಾಪ್ ನ್ಯೂಸ್

ಯುಎಇಯಲ್ಲಿ ಲುಲು ಯೂಸುಫ್ ಅಲಿಯ ಸಹೋದರನ ಪುತ್ರಿಯ ವಿವಾಹ; 4 ದಿನಗಳ ಕಾಲ ನಡೆದ ವಿವಾಹದಲ್ಲಿ 1000ಕ್ಕೂ ಅಧಿಕ ಸೆಲೆಬ್ರಿಟಿಗಳು ಭಾಗಿ, ಈ ವರ್ಷ ಯುಎಇಯಲ್ಲಿ ನಡೆದ ಅತಿದೊಡ್ಡ ಮದುವೆಯ ಸಿದ್ದತೆ ಹೇಗಿತ್ತು ಗೊತ್ತಾ?

ಯುಎಇ ನಿವಾಸಿಗಳು ವಾರಾಂತ್ಯದಲ್ಲಿ ಅಬುಧಾಬಿಯಲ್ಲಿ ಅತಿರಂಜಿತ ಸಮಾರಂಭ ಮತ್ತು ವರ್ಷದ ಅತಿದೊಡ್ಡ ವಿವಾಹ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ ಉದ್ವಿಗ್ನತೆ, ನಿಷೇಧಾಜ್ಞೆ ಜಾರಿ

ಟಿಪ್ಪು & ಔರಂಗಜೇಬ್ ಬಗ್ಗೆ ಪೋಸ್ಟ್ ವಿವಾದ, ಹಿಂಸಾಚಾರಕ್ಕೆ ತಿರುಗಿದ ಪ್ರತಿಭಟನೆ, ಸ್ಥಳದಲ್ಲಿ

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ ಹಣ ಪಡೆಯಲು ಯತ್ನಿಸಿದ ಮಹಿಳೆ; ವಿಷಯ ಗೊತ್ತಾಗಿ ಪತಿಯೇ ಪತ್ನಿಯ ವಿರುದ್ಧ ದೂರು ಕೊಟ್ಟ!

ಒಡಿಶಾ ರೈಲು ದುರಂತದಲ್ಲಿ ಪತಿ ಸತ್ತಿದ್ದಾನೆಂದು ಸುಳ್ಳು ಹೇಳಿ 17 ಲಕ್ಷ ಪರಿಹಾರದ

Developed by eAppsi.com