ಗುಜರಾತ್;ಗುಜರಾತ್‌ನ ದಾಹೋದ್‌ನ ಲಿಮ್ಖೇಡಾ ಪಟ್ಟಣದಲ್ಲಿ ಗುಜರಾತ್ ಗಲಭೆ ವೇಳೆ ನಡೆದ ಸಾಮೂಹಿಕ ಅತ್ಯಾಚಾರದ ಸಂತ್ರಸ್ತೆ ಬಿಲ್ಕಿಸ್ ಬಾನು ಅವರ ಸೋದರ ಮಾವ ಮತ್ತು ಅವರ ಮಗನ ಮೇಲೆ ಗುಂಪೊಂದು ಹಲ್ಲೆ ನಡೆಸಿದೆ ಎಂದು ವರದಿಯಾಗಿದೆ.
ಘಟನೆಯಲ್ಲಿ ಅಜಿತ್ ಘಾಂಚಿ ಹಾಗೂ ಅವರ ಪುತ್ರ ಆಸಿಫ್ ಗಾಯಗೊಂಡಿದ್ದು, ಚಿಕಿತ್ಸೆಗಾಗಿ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.
2002ರಲ್ಲಿ ಗೋಧ್ರಾ ನಂತರದ ಗಲಭೆಯಲ್ಲಿ 11 ಮಂದಿಯಿಂದ ಸಾಮೂಹಿಕ ಅತ್ಯಾಚಾರಕ್ಕೊಳಗಾದ ಬಿಲ್ಕಿಸ್ ಬಾನು ಅವರ ಅತ್ಯಾಚಾರದ ಅಪರಾಧಿಗಳು ಇತ್ತೀಚೆಗೆ ಬಿಡುಗಡೆಯಾಗಿದ್ದರು.
ಬಿಲ್ಕಿಸ್ ಅವರ ಸಂಬಂಧಿಕರ ಎಂಬ ಕಾರಣದಿಂದ ತಮ್ಮನ್ನು ಗುರಿಯಾಗಿಸಿಕೊಂಡಿದ್ದಾರೆ ಎಂದು ಇಬ್ಬರೂ ಆರೋಪಿಸಿದ್ದಾರೆ.
ಗಲಭೆಯ ವೇಳೆ ಆಕೆಯ ಕುಟುಂಬದ ಒಂಬತ್ತು ಸದಸ್ಯರನ್ನು ಕೂಡ ಕೊಲ್ಲಲಾಗಿತ್ತು.
ರಂಧಿಕ್‌ಪುರದ ನಿವಾಸಿ ಅಜಿತ್, ತನ್ನ ಮಗ ಆಸಿಫ್‌ನೊಂದಿಗೆ ತನ್ನ ಮೇಕೆಗಳನ್ನು ಮಾರಾಟ ಮಾಡಲು ಲಿಮ್ಖೇಡಾದ ಮಾರುಕಟ್ಟೆಗೆ ಹೋಗಿದ್ದೆ ಎಂದು ಹೇಳಿದರು.
ಉಮೇಶ್ ಎಂಬ ವ್ಯಕ್ತಿ ಪ್ರವೇಶ ಶುಲ್ಕ ಕೇಳಿದ್ದಾನೆ. ನಾನು ಅವನಿಗೆ 500 ರೂಪಾಯಿ ಕೊಟ್ಟೆ ಆದರೆ ಅವನ ಬಳಿ ಚೇಂಜ್ ಇರಲಿಲ್ಲ. ಇದು ಸ್ವಲ್ಪ ವಾಗ್ವಾದಕ್ಕೆ ಕಾರಣವಾಯಿತು ಮತ್ತು ಅವರು ನನ್ನ ಊರಿನ ಬಗ್ಗೆ ಕೇಳಿದರು ಎಂದು ಅಜಿತ್ ಹೇಳಿದರು.
ನಾನು ರಣಧಿಕ್‌ಪುರದವನು ಎಂದು ಹೇಳಿದಾಗ ಅವನು ನಾನು ಬಿಲ್ಕಿಸ್ ಬಾನು ಕುಟುಂಬದವನು ಎಂದು ಹೇಳಿದನು ಮತ್ತು ನನ್ನನ್ನು ನಿಂದಿಸಲು ಪ್ರಾರಂಭಿಸಿದನು. ಅಷ್ಟರಲ್ಲಾಗಲೇ ಅವನು ಮತ್ತು ಕೆಲವರು ನನ್ನ ಮತ್ತು ನನ್ನ ಮಗನ ಮೇಲೆ ಹಲ್ಲೆ ಮಾಡಲು ಪ್ರಾರಂಭಿಸಿದರು. ಅವರು ನನ್ನ ಹಣವನ್ನು ಸಹ ನನಗೆ ಹಿಂತಿರುಗಿಸಲಿಲ್ಲ ಎಂದು ಬಿಲ್ಕಿಸ್ ಅವರ ಸೋದರ ಅಜಿತ್ ಹೇಳಿದ್ದಾರೆ.
ಈ ವೇಳೆ ಅಜಿತ್ ಅವರ ಕಾಲು ಮುರಿತವಾದರೆ, ಆಸಿಫ್ ತಲೆಗೆ ಗಾಯವಾಗಿತ್ತು. ಗೇಟ್ ಪಾಸ್ ಮಾಡುತ್ತಿದ್ದ ವ್ಯಕ್ತಿ ನನ್ನ ತಂದೆಯನ್ನು ನಿಂದಿಸಿದ್ದಾನೆ. ನಂತರ ನಾವು ಬಿಲ್ಕಿಸ್ ಅವರ ಸಂಬಂಧಿಕರು ಎಂದು ಸುಮಾರು 15 ಜನರು ನಮ್ಮ ಮೇಲೆ ಹಲ್ಲೆ ನಡೆಸಿದ್ದಾರೆ. ಅವರು ನಮಗೆ ಬೆದರಿಕೆ ಹಾಕಿದರು ಮತ್ತು ರಂಧಿಕ್‌ಪುರವನ್ನು ತೊರೆಯುವಂತೆ ಹೇಳಿದರು ಎಂದು ಆಸಿಫ್ ಆರೋಪಿಸಿದ್ದಾರೆ.
ಅಜಿತ್ ಮತ್ತು ಆಸಿಫ್ ಮೇಲೆ ಹಲ್ಲೆ ನಡೆಸಲಾಗಿದೆ ಆದರೆ ಹಣದ ವಿಚಾರದಲ್ಲಿ ಜಗಳ ನಡೆದಿದೆ ಎಂದು ದಾಹೋದ್‌ನ ಹಿರಿಯ ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.ಅವರಿಬ್ಬರೂ ಬಿಲ್ಕಿಸ್ ಅವರ ಸಂಬಂಧಿಕರು ಆದರೆ ಜಗಳಕ್ಕೆ ಅದರೊಂದಿಗೆ ಯಾವುದೇ ಸಂಬಂಧವಿಲ್ಲ. ಅವರ ಸಂಬಂಧಿಕರು ಎಂಬ ಕಾರಣಕ್ಕಾಗಿ ಹಲ್ಲೆ ಮಾಡಿಲ್ಲ. ಇದು ಹಣದ ಬಗ್ಗೆ ನಡೆದ ಹಲ್ಲೆ. ಇಬ್ಬರ ಮೇಲೆ ಹಲ್ಲೆ ನಡೆಸಿದವರ ವಿರುದ್ಧ ಎಫ್‌ಐಆರ್ ದಾಖಲಿಸುವ ಪ್ರಕ್ರಿಯೆಯಲ್ಲಿದ್ದೇವೆ ಎಂದು ಅಧಿಕಾರಿ ತಿಳಿಸಿದ್ದಾರೆ.