ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ರೈಡ್ ಮಾಡುವಾಗ ಹೆದ್ದಾರಿಯಲ್ಲಿ ಭೀಕರ ಅಪಘಾತ, ಯುವಕ ದುರ್ಮರಣ

ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ರೈಡ್ ಮಾಡುವಾಗ ಹೆದ್ದಾರಿಯಲ್ಲಿ ಭೀಕರ ಅಪಘಾತ, ಯುವಕ ದುರ್ಮರಣ

ನವದೆಹಲಿ;ಯಮುನಾ ಎಕ್ಸ್‌ಪ್ರೆಸ್‌ ವೇನಲ್ಲಿ ನಡೆದ ಭೀಕರ ರಸ್ತೆ ಅಪಘಾತದಲ್ಲಿ ಯೂಟ್ಯೂಬರ್ ಹಾಗೂ ಬೈಕ್ ರೇಸರ್‌ ಅಗಸ್ತ್ಯ ಚೌಹ್ಹಾಣ್‌ ಮೃತಪಟ್ಟಿದ್ದಾರೆ.

ವೃತ್ತಿಪರ ಬೈಕರ್ ಆಗಿರುವ ಅಗಸ್ತ್ಯ, ತಮ್ಮದೇ ಸೂಪರ್‌ ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್ ವೇಗದಲ್ಲಿ ಬೈಕ್ ಓಡಿಸುವಾಗ ಅಪಘಾತದಲ್ಲಿ ದುರ್ಮರಣಕ್ಕೀಡಾಗಿದ್ದಾರೆ.

ಯೂಟ್ಯೂಬರ್ ಅಗಸ್ತ್ಯ ನವದೆಹಲಿಯಿಂದ ತಮ್ಮ ರೇಸಿಂಗ್ ಬೈಕ್‌ನಲ್ಲಿ ತೆರಳುವಾಗ ಉತ್ತರ ಪ್ರದೇಶದ ತಪ್ಪಲ್‌ ಪೊಲೀಸ್ ಠಾಣೆಯಿಂದ 47 ಮೈಲಿ ದೂರದಲ್ಲಿ ಯಮುನಾ ಎಕ್ಸ್‌ಪ್ರೆಸ್‌ವೇ ಈ ಅವಘಡ ಸಂಭವಿಸಿದೆ.

ಬೈಕ್‌ನಲ್ಲಿ ಗಂಟೆಗೆ 300 ಕಿಲೋ ಮೀಟರ್‌ ವೇಗದಲ್ಲಿ ಬೈಕ್‌ ಓಡಿಸುವಾಗ ಬೈಕಿನ ಮೇಲಿನ ನಿಯಂತ್ರಣ ಕಳೆದುಕೊಂಡರು. ಆ ಬಳಿಕ ರೇಸ್ ಬೈಕ್ ಅದೇ ವೇಗದಲ್ಲಿ ಯಮುನಾ ಎಕ್ಸ್‌ಪ್ರೆಸ್‌ ವೇನ ರಸ್ತೆ ವಿಭಜಕಕ್ಕೆ ಢಿಕ್ಕಿಯಾಗಿದೆ.

ಅಪಘಾತದ ತೀವ್ರತೆಗೆ ಅಗಸ್ತ್ಯ ಧರಿಸಿದ್ದ ಗುಣಮಟ್ಟದ ಹೆಲ್ಮೆಟ್‌ ಚೂರಾಗಿ ಬಿದ್ದಿತ್ತು. ಪರಿಣಾಮ ಬೈಕರ್ ಅಗಸ್ತ್ಯ ಚೌಹ್ಹಾಣ್ ಅಲ್ಲೇ ಕ್ಷಣ ಮಾತ್ರದಲ್ಲೇ ಕೊನೆಯುಸಿರೆಳೆದರು. ಮಾರಾಣಾಂತಿಕವಾದ ಗಾಯವಾಗಿದ್ದರಿಂದ ಅವರ ದೇಹದ ಸುತ್ತಲೂ ರಕ್ತ ಮಡುಗಟ್ಟಿ ನಿಂತಿತ್ತು ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿರುವುದಾಗಿ ವರದಿಯಾಗಿದೆ.

ಅಗಸ್ತ್ಯ ಚೌಹ್ಹಾಣ್‌, ಉತ್ತರಾಖಂಡ್‌ನ ಡೆಹ್ರಾಡೂನ್‌ ನಿವಾಸಿಯಾಗಿದ್ದರು. ಅಗಸ್ತ್ಯ ‘ಪ್ರೊ ರೈಡರ್‌ 1000’ಎನ್ನುವ ಹೆಸರಿನ ಯೂಟ್ಯೂಬ್‌ ಚಾನೆಲ್ ನಡೆಸುತ್ತಿದ್ದರು. ಈ ಯೂಟ್ಯೂಬ್ ಚಾನೆಲ್‌ಗೆ 1.2 ಮಿಲಿಯನ್‌ ಸಬ್‌ಸ್ಕ್ರೈಬರ್ ಇದ್ದಾರೆ. ಈ ಅವಘಡ ಸಂಭವಿಸುವ 16 ಗಂಟೆ ಮೊದಲು ಯೂಟ್ಯೂಬ್‌ನಲ್ಲಿ ತಮ್ಮ ಸ್ನೇಹಿತರಿಗೆ ನವದೆಹಲಿಗೆ ಬನ್ನಿ ಎಂದು ಮನವಿ ಮಾಡಿಕೊಂಡಿದ್ದರು.

ಅಗಸ್ತ್ಯ ಬೈಕ್ ಓಡಿಸುತ್ತಲೇ ವಿಡಿಯೋ ಮಾಡುವ ಮೂಲಕ ಗಮನ ಸೆಳೆಯುತ್ತಿದ್ದರು. ತಮ್ಮ ಬೈಕ್ ರೈಡ್‌ ವಿಡಿಯೋ ಅಪ್‌ಲೋಡ್ ಮಾಡುವಾಗ ತನ್ನೆಲ್ಲ ವೀಕ್ಷಕರಿಗೆ ದಯವಿಟ್ಟು ಯಾರೂ ವೇಗವಾಗಿ ಡ್ರೈವ್ ಮಾಡಬೇಡಿ ಎಂದು ಮನವಿ ಮಾಡಿಕೊಳ್ಳುತ್ತಿದ್ದರು.

ಮೋಟರ್‌ಬೈಕ್ ರೇಸಿಂಗ್ ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು ತೆರಳುತ್ತಿದ್ದ ಅಗಸ್ತ್ಯ, ವೇಗದ ಚಾಲನೆ ಮಾಡಲು ಹೋಗಿ ಇದೀಗ ಕೊನೆಗೆ ಪ್ರಾಣವನ್ನೇ ಕಳೆದುಕೊಂಡಿದ್ದಾರೆ.

ಟಾಪ್ ನ್ಯೂಸ್

ಪ್ರವೀಣ್ ನೆಟ್ಟಾರು ಪತ್ನಿಗೆ ತೋರಿದ ಮಾನವೀಯತೆ ಫಾಝಿಲ್ & ಮಸೂದ್ ಕುಟುಂಬಕ್ಕೆ ತೋರಿಸುತ್ತಾರ ಸಿದ್ದರಾಮಯ್ಯ?ಬಿಜೆಪಿ ಅವಧಿಯಲ್ಲಿ ಹತ್ಯೆಯಾದ ಯುವಕರಿಬ್ಬರ ಕುಟುಂಬಕ್ಕೆ ಪರಿಹಾರ ಕೊಡಿಸುವಲ್ಲಿ‌ ಕಾಂಗ್ರೆಸ್ಸಿಗರು ಮೌನ?

BIG NEWS ತೀವ್ರಗೊಂಡ ಮಹಿಳಾ ಕುಸ್ತಿಪಟುಗಳ ಪ್ರತಿಭಟನೆ, ನೂತನ ಸಂಸತ್ ಭವನಕ್ಕೆ ಮೆರವಣಿಗೆ ತೆರಳಲು ಯತ್ನ; ಸಾಕ್ಷಿ ಮಲಿಕ್, ವಿನೇಶ್ ಪೋಗಟ್ ಸೇರಿ ಹಲವರು ವಶಕ್ಕೆ

ನವದೆಹಲಿ;ನೂತನ ಸಂಸತ್​ ವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಲು ಯತ್ನಿಸುತ್ತಿದ್ದ ಕುಸ್ತಿಪಟುಗಳನ್ನು ಪೊಲೀಸರು ಬಂಧಿಸಿದ್ದಾರೆ.

Developed by eAppsi.com