ಬೈಕ್ ಗೆ ಕಾರು ಢಿಕ್ಕಿ ಹೊಡೆದು ಭೀಕರ ಅಪಘಾತ; ಯುವಕ ಮೃತ್ಯು

ಕಾಸರಗೋಡು:ಬೈಕ್ ಗೆ ಕಾರು ಢಿಕ್ಕಿ ಹೊಡೆದ ಪರಿಣಾಮ ಯುವಕನೋರ್ವ ಮೃತಪಟ್ಟ ಘಟನೆ ಪೆರಿಯದಲ್ಲಿ ನಡೆದಿದೆ.

ದಿಪಿನ್ ಕುಮಾರ್ (31)ಮೃತರು.ಆಲಕ್ಕೋಡ್ ನಿವಾಸಿ ಯಾಗಿದ್ದ ದಿಪಿನ್ ಸಂಜೆ ಬೈಕ್ ನಲ್ಲಿ ತೆರಳುತ್ತಿದ್ದಾಗ ಕಾರು ಢಿಕ್ಕಿಯಾಗಿ ಅಪಘಾತ ನಡೆದಿದೆ.

ಗಂಭೀರವಾಗಿ ಗಾಯಗೊಂಡ ದಿಪಿನ್ ಗೆ ತಕ್ಷಣ ಕಾಸರಗೋಡು ಆಸ್ಪತ್ರೆಗೆ ದಾಖಲಿಸಲಾಗಿದೆ.ಈ ವೇಳೆ ಅವರು ಮೃತಪಟ್ಟಿದ್ದರು.

ಈ ಕುರಿತು ಬೇಕಲ ಠಾಣಾ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಟಾಪ್ ನ್ಯೂಸ್