ಬೈಕ್ ಗೆ ಕಾರು ಢಿಕ್ಕಿ; ಮದುವೆ ಕಾರ್ಯಕ್ರಮಕ್ಕೆ ತೆರಳುತ್ತಿದ್ದ ಇಬ್ಬರು ದುರ್ಮರಣ
ಮಂಡ್ಯ; ಬೈಕ್ ಮತ್ತು ಕಾರು ನಡುವೆ ಸಂಭವಿಸಿದ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಮೃತಪಟ್ಟ ಘಟನೆ
ಮಳವಳ್ಳಿ ತಾಲೂಕಿನ ಸರಗೂರು ಬಳಿಯ ಟಿ.ನರಸೀಪುರ-ಬೆಳಕವಾಡಿ ರಸ್ತೆಯಲ್ಲಿ ನಡೆದಿದೆ.
ಗ್ರಾಮದ ಶಿವಪ್ಪ(52), ಸತೀಶ್ (46) ಸಾವನ್ದನಪ್ಪಿದ್ದಾರೆ
ಅಪಘಾತದ ರಸಭಕ್ಕೆ ಬೈಕ್ ಸ್ಥಳದಲ್ಲೇ ಹೊತ್ತಿ ಉರಿದಿದೆ.
ಕಾರು-ಬೈಕ್ ನಡುವೆ ನಡೆದ ಈ ಅಪಘಾತದಲ್ಲಿ ಮೃತರು ಕಂಚನಹಳ್ಳಿ ನಿವಾಸಿಗಳು.
ಸಂಬಂಧಿಕರ ಮದುವೆಗೆಂದು ಬೈಕ್ ನಲ್ಲಿ ತೆರಳುತ್ತಿದ್ದಾಗ ಈ ಘಟನೆ ನಡೆದಿದೆ. ಸರಗೂರು ಬಳಿ ಎದುರಿನಿಂದ ಬರುತ್ತಿದ್ದ ಕಾರಿಗೆ ಬೈಕ್ ಡಿಕ್ಕಿ ಹೊಡೆದಿದೆ.
ಅಪಘಾತದಿಂದ ತೀವ್ರ ಗಾಯಗೊಂಡಿದ್ದ ಬೈಕ್ ಸವಾರ ಶಿವಪ್ಪ ಎಂಬುವರು ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆದಲ್ಲೇ ಸತೀಶ್ ಮೃತಪಟ್ಟಿದ್ದಾರೆ.
ಈ ಕುರಿತು ಬೆಳಕವಾಡಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.