ಶಾಲೆಯಲ್ಲಿ ಪ್ರಾಂಶುಪಾಲರು & ಶಿಕ್ಷಕಿಯರ ನಡುವೆ ಹೊಡೆದಾಟ;ಶಾಕಿಂಗ್ ಘಟನೆಯ ವಿಡಿಯೋ ವೀಕ್ಷಿಸಿ…
ಬಿಹಾರ;ಪಾಟ್ನಾ ಜಿಲ್ಲೆಯ ಕೌರಿಯಾ ಪಂಚಾಯತ್‌ನಲ್ಲಿರುವ ಬಿಹ್ತಾ ಮಾಧ್ಯಮಿಕ ಶಾಲೆಯಲ್ಲಿ ಶಾಲಾ ಪ್ರಾಂಶುಪಾಲರು ಮತ್ತು ಶಿಕ್ಷಕರು ತೀವ್ರ ವಾಗ್ವಾದ ನಡೆಸಿ ಬಳಿಕ ಹೊಡೆದಾಡಿಕೊಂಡಿದ್ದಾರೆ.ಈ ಕುರಿತು ವಿಡಿಯೋ ಕೂಡ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.
ಶಾಲೆಯ ವಿದ್ಯಾರ್ಥಿಗಳು ಮೊದಲು ತರಗತಿಯ ಒಳಗೆ ಮತ್ತು ನಂತರ ಹೊರಗೆ ಮೈದಾನದಲ್ಲಿ ತಮ್ಮ ಶಿಕ್ಷಕರು ಹೊಡೆದಾಡುವುದನ್ನು ನೋಡುತ್ತಾ ನಿಂತಿದ್ದಾರೆ. ಕೆಲವರು ಹೊಡೆದಾಟವನ್ನು ರೆಕಾರ್ಡ್ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡಿದ್ದಾರೆ.
ಮಿಡ್ಲ್ ಸ್ಕೂಲ್ ಪ್ರಿನ್ಸಿಪಾಲ್ ಕಾಂತಿ ಕುಮಾರಿ ಹಾಗೂ ಶಿಕ್ಷಕಿ ಅನಿತಾ ಕುಮಾರಿ ನಡುವೆ ವೈಯಕ್ತಿಕ ವಿಚಾರದಲ್ಲಿ ಜಗಳ ಆರಂಭವಾಗಿತ್ತು ಎಂದು ವರದಿ ವಿವರಿಸಿದೆ. ನೆಲದಲ್ಲಿ ಉರುಳಾಡಿ, ಚಪ್ಪಲಿಯಿಂದ ಹೊಡೆದಾಡಿಕೊಂಡಿರುವ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.
ವಾಗ್ವಾದ ಉಲ್ಬಣಗೊಳ್ಳುತ್ತಿದ್ದಂತೆ, ಓರ್ವ ಮಹಿಳೆ ತರಗತಿಯಿಂದ ಹೊರಬರಲು ಪ್ರಯತ್ನಿಸಿದರೆ, ಮತ್ತೊಬ್ಬರು ಕೈಯಲ್ಲಿ ಚಪ್ಪಲಿ ಹಿಡಿದು ಓಡಿ ಅವಳಿಗೆ ಹೊಡೆಯಲು ಪ್ರಾರಂಭಿಸಿದ್ದಾರೆ.ಈ ವೇಳೆ ಇನ್ನೋರ್ವ ಮಹಿಳೆ ಕೂಡ ಸೇರಿಕೊಂಡು ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.
ಘಟನೆಯ ವೀಡಿಯೊಗಳು ಸಾಮಾಜಿಕ ಮಾಧ್ಯಮಗಳಲ್ಲಿ ಗಮನಾರ್ಹವಾಗಿ ವೈರಲ್ ಆಗಿದೆ.ಆದರೂ ಘಟನೆಯ ಬಗ್ಗೆ ಸ್ಪಷ್ಟತೆ ನಮಗಿಲ್ಲ ಎಂದು ಇಂಡಿಯಾ ಟುಡೆ ವರದಿ ಮಾಡಿದೆ.
ಘಟನೆಯ ಬಗ್ಗೆ ಬ್ಲಾಕ್ ಶಿಕ್ಷಣ ಅಧಿಕಾರಿಯನ್ನು ಕೇಳಿದಾಗ, ಇದು ಬಿಹ್ತಾ ಮಧ್ಯಮ ಶಾಲೆಯಲ್ಲಿ ನಡೆದಿದೆ ಎಂದು ಅವರು ಖಚಿತಪಡಿಸಿದರು. ಹಂಗಾಮಿ ಪ್ರಾಂಶುಪಾಲರು ಮತ್ತು ಸಹಾಯಕ ಶಿಕ್ಷಕರ ನಡುವಿನ ವೈಯಕ್ತಿಕ ವಿವಾದದಿಂದ ಈ ವಾಗ್ವಾದ ಉಂಟಾಗಿದ್ದು, ಇದು ಸರ್ಕಾರದ ನಿಯಮಾವಳಿಗಳ ಉಲ್ಲಂಘನೆಯಾಗಿದೆ ಎಂದು ಅವರು ಹೇಳಿದ್ದಾರೆ ಎಂದು ವರದಿ ತಿಳಿಸಿದೆ.
#Patna #Bihta #koriya #Panchayat की #शिक्षिका से #परीक्षा ना लेना #सरकार इन्हें आता है #जूतम_पैजार #NitishKumar #Teacher #fight #MiddleSchool pic.twitter.com/ZTI0mbF5YX
— JOURNALIST SARVESH (@sarveshmediaman) May 25, 2023