ರಸ್ತೆಯಲ್ಲೇ ವೃದ್ಧನಿಗೆ ಲಾಠಿಯಿಂದ ಥಳಿಸಿದ ಇಬ್ಬರು ಮಹಿಳಾ ಪೊಲೀಸರು; ವಿಡಿಯೋ ವೀಕ್ಷಿಸಿ…

ಬಿಹಾರ;ಇಬ್ಬರು ಮಹಿಳಾ ಪೊಲೀಸರು ರಸ್ತೆಯಲ್ಲೇ ವೃದ್ಧರೊಬ್ಬರಿಗೆ ಲಾಟಿಯಿಂದ ಥಳಿಸಿರುವ ವೀಡಿಯೊ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದೆ.

ಈ ವಿಡಿಯೋವನ್ನು ಪತ್ರಕರ್ತ ಮುಖೇಶ್ ಸಿಂಗ್ ಟ್ವಿಟ್ಟರ್ನಲ್ಲಿ ಹಂಚಿಕೊಂಡಿದ್ದು, ವೃದ್ಧನನ್ನು ಇಬ್ಬರು ಪೊಲೀಸರು ಪಬ್ಲಿಕ್ ನಲ್ಲಿ ಥಳಿಸುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಈ ವಿಡಿಯೊವನ್ನು ತಮ್ಮ ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿರುವ ಸಿಂಗ್, ಈ ಇಬ್ಬರು ಮಹಿಳಾ ಪೊಲೀಸ್‌ ಆಧಿಕಾರಿಗಳು ಹೊಡೆಯುತ್ತಿರುವ 70 ವರ್ಷದ ವೃದ್ಧ ಹೆಸರು ಪಾಂಡೆ ಜಿ ಎಂದು ಹೇಳಿದ್ದಾರೆ. ಅವರು ನಿವೃತ್ತ ಶಿಕ್ಷಕರಾಗಿದ್ದರು. ಬೈಸಿಕಲ್ ನಲ್ಲಿ ಬಿದ್ದಾಗ ಎದ್ಧೇಳಲು ತಡವಾಗಿದ್ದಕ್ಕೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿದೆ.

ಟಾಪ್ ನ್ಯೂಸ್