ಇಡೀ ಗ್ರಾಮದ ಕರೆಂಟ್ ಕಟ್ ಮಾಡಿ ಲವ್ವರ್ ಗೆ ಭೇಟಿಯಾಗುತ್ತಿದ್ದ ಯುವತಿ; ಕೈಯ್ಯಾರೆ ಹಿಡಿದು ಇಬ್ಬರಿಗೂ ಮದುವೆ ಮಾಡಿಸಿ ಸಮಸ್ಯೆ ಬಗೆಹರಿಸಿದ ಜನ!

ಇಬ್ಬರನ್ನು ಮದುವೆ ಮಾಡುವ ತೀರ್ಮಾನಕ್ಕೆ ಬಂದು ಕೊನೆಗೂ ಗ್ರಾಮದ ಪವರ್ ಕಟ್ ಸಮಸ್ಯೆಗೆ ಕಂಡುಕೊಂಡ ಪರಿಹಾರ!

ಬಿಹಾರ;ವಿಲಕ್ಷಣ ಘಟನೆಯೊಂದರಲ್ಲಿ ಗೆಳತಿಯೊಬ್ಬಳು ತನ್ನ ಪ್ರಿಯಕರನನ್ನು ಭೇಟಿಯಾಗಲು ಬಿಹಾರದ ಬೆಟ್ಟಿಯಾ ಗ್ರಾಮದ ವಿದ್ಯುತ್ ನ್ನು ರಾತ್ರಿಯಲ್ಲಿ ಕಡಿತಗೊಳಿಸಿದ್ದು, ಪ್ರೇಮಿ ತನ್ನ ಗೆಳತಿಯನ್ನು ಭೇಟಿಯಾಗಲು ಹೋದಾಗ ವಿಷಯ ಬೆಳಕಿಗೆ ಬಂದಿದೆ.

ಗ್ರಾಮಸ್ಥರು ಇಬ್ಬರನ್ನೂ ರೆಡ್‌ಹ್ಯಾಂಡ್‌ ಆಗಿ ಹಿಡಿದಿದ್ದರಿಂದ ಗೆಳತಿ ಗ್ರಾಮದ ಜನರಿಗೆ ಸಿಕ್ಕಿ ಬಿದ್ದಿದ್ದಾಳೆ.ಈ ವಿಷಯ ತಿಳಿದ ಗ್ರಾಮಸ್ಥರು ಪ್ರಿಯಕರನಿಗೆ ಬೆಲ್ಟ್‌ನಿಂದ ಥಳಿಸಿದ್ದಾರೆ.

ಇಡೀ ಗ್ರಾಮಕ್ಕೆ ವಿದ್ಯುತ್ ಪೂರೈಸುತ್ತಿದ್ದ ಟ್ರಾನ್ಸ್‌ಫಾರ್ಮರ್‌ ಬಳಿ ಬಂದು ಪ್ರೇಮಿಯನ್ನು ಭೇಟಿಯಾಗಲು ಯುವತಿ ಕಾಯುತ್ತಿದ್ದಳು. ಪ್ರಿಯಕರ ಬಂದು ಮೊದಲು ಟ್ರಾನ್ಸ್‌ಫಾರ್ಮರ್‌ನಲ್ಲಿದ್ದ ಎಬಿ (ಏರ್ ಬ್ರೇಕ್ ಸ್ವಿಚ್) ಸ್ವಿಚ್ ಕೆಳಗೆ ಬೀಳಿಸುತ್ತಿದ್ದನು. ಇದರಿಂದಾಗಿ ಇಡೀ ಗ್ರಾಮದ ದೀಪಗಳು ಆಫ್ ಆಗುತ್ತಿದ್ದವು.ಆಗ ಇಬ್ಬರೂ ಕತ್ತಲಲ್ಲಿ ಒಂದಾಗುತ್ತಿದ್ದರು.

ಗ್ರಾಮದಲ್ಲಿ ದಿನಾಲೂ ಕರೆಂಟ್ ಕಟ್ ಆಗುವ ಕಾರಣ ಕಳ್ಳತನ ಪ್ರಕರಣಗಳು ಹೆಚ್ಚಾಗಿದ್ದು,ಜನರು ನಿಗಾ ವಹಿಸಿದ್ದರು.ರಾತ್ರಿ ಹೊತ್ತು ಗಸ್ತು ತಿರುಗುತ್ತಿದ್ದರು.ಇದೇ ವೇಳೆ ಜುಲೈ 14ರಂದು ಗೆಳತಿಯನ್ನು ಭೇಟಿಯಾಗಲು ಬಂದಿದ್ದ ಲವರ್ಸ್ ರೆಡ್‌ಹ್ಯಾಂಡ್‌ ಆಗಿ ಸಿಕ್ಕಿಬಿದ್ದಿದ್ದಾರೆ. ಗ್ರಾಮಸ್ಥರು ಇಬ್ಬರನ್ನೂ ಹಿಡಿದು ಥಳಿಸಿದ್ದಾರೆ. ಈ ವಿಡಿಯೋ ಎಲ್ಲೆಡೆ ವೈರಲ್ ಆಗಿದೆ.

ನೌತಾನ್ ಪೊಲೀಸ್ ಠಾಣೆ ವ್ಯಾಪ್ತಿಯ ಹಳ್ಳಿಯಲ್ಲಿ ಈ ಘಟನೆ ನಡೆದಿದೆ ಎಂದು ತಿಳಿದು ಬಂದಿದೆ.

ವಿಡಿಯೋ ವೈರಲ್ ಆದ ಬಳಿಕ ಯುವತಿಯ ಪ್ರೇಮಿ ಆಕೆಯ ಗ್ರಾಮಕ್ಕೆ ಬಂದು ಆಕೆಯನ್ನು ಥಳಿಸಿದವರ ಮನೆಗೆ ನುಗ್ಗಿ ದಾಂಧಲೆ ನಡೆಸಿದ್ದಾನೆ ಎಂದು ಹೇಳಲಾಗುತ್ತಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ವೀಡಿಯೋ ಆಧರಿಸಿ ಮೂವರನ್ನು ವಶಕ್ಕೆ ಪಡೆದಿದ್ದಾರೆ.ಇದೇ ವೇಳೆ ಪ್ರಿಯಕರ ಮತ್ತು ಗೆಳತಿಯ ಕುಟುಂಬಗಳ ನಡುವೆ ಸಮಸ್ಯೆ ಇತ್ಯರ್ಥವಾಗಿದೆ.

ಇಬ್ಬರೂ ಶೀಘ್ರದಲ್ಲೇ ಮದುವೆಯಾಗಲಿದ್ದಾರೆ ಎಂದು ಅವರ ಸಂಬಂಧಿಕರು ತಿಳಿಸಿದ್ದಾರೆ. ಅದೇ ಸಮಯದಲ್ಲಿ, ನೌತನ್ ಪೊಲೀಸ್ ಠಾಣೆಯ ಮುಖ್ಯಸ್ಥ ಖಾಲಿದ್ ಅಖ್ತರ್, ಈ ವಿಷಯವು ಪ್ರೇಮ ಸಂಬಂಧವಾಗಿದೆ.ಎಲ್ಲಾ ಆಯಾಮಗಳಲ್ಲಿ ಪರಿಶೀಲಿಸಿ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್