ಶಾಲೆಯಲ್ಲಿ 7 ವರ್ಷದ ಬಾಲಕನ ಮೇಲೆ ಹಲ್ಲೆ ನಡೆಸಿದ ಶಿಕ್ಷಕ, ಗಂಭೀರವಾಗಿದ್ದ ಬಾಲಕ ಆಸ್ಪತ್ರೆಗೆ ತಲುಪುವ ವೇಳೆ ಸಾವು; ಆಘಾತಕ್ಕೊಳಗಾದ ಕುಟುಂಬ

ಬಿಹಾರ;ಶಾಲಾ ಶಿಕ್ಷಕನ ಹಲ್ಲೆಯಿಂದಾಗಿ ಏಳು ವರ್ಷದ ಬಾಲಕ ಮೃತಪಟ್ಟಿರುವ ಆರೋಪ ಬಿಹಾರದ ಸಹರ್ಸಾ ಜಿಲ್ಲೆಯಿಂದ ಕೇಳಿ ಬಂದಿದೆ.

ಮೃತ ಬಾಲಕನನ್ನು ಆದಿತ್ಯ ಕುಮಾರ್(7) ಎಂದು ಗುರುತಿಸಲಾಗಿದೆ.

ಸಹರ್ಸಾ ಜಿಲ್ಲೆಯ ಹಳ್ಳಿಯೊಂದರ ಖಾಸಗಿಯಲ್ಲಿ ಎಲ್‌.ಕೆ.ಜಿ ವಿದ್ಯಾರ್ಥಿಯಾಗಿದ್ದ ಆದಿತ್ಯ, ಕಳೆದ 10 ದಿನಗಳಿಂದ ಹಾಸ್ಟೆಲ್‌ನಲ್ಲಿ ವಾಸವಾಗಿದ್ದನು.

ಮಾರ್ಚ್ 14ರಂದು ನಮ್ಮ ಮಗುವನ್ನು ಸಹರ್ಸಾ ಜಿಲ್ಲೆಯ ಸ್ಕೂಲ್ ಕಮ್ ಹಾಸ್ಟೆಲ್‌ಗೆ ಕಳುಹಿಸಿದ್ದೇವೆ. ಶುಕ್ರವಾರ ಶಾಲೆಯ ಆಡಳಿತದಿಂದ ನಮಗೆ ಫೋನ್ ಕರೆ ಬಂದಿತು. ಆದಿತ್ಯ ಪ್ರಜ್ಞಾಹೀನರಾಗಿದ್ದು, ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದಿದ್ದರು. ನಾವು ಆಸ್ಪತ್ರೆ ತಲುಪುವ ವೇಳೆಗೆ ಮೃತಪಟ್ಟಿದ್ದಾನೆ ಎಂದು ಬಾಲಕನ ತಂದೆ ಪ್ರಕಾಶ್ ಹೇಳಿದ್ದಾರೆ.

ಸದರ್ ಪೊಲೀಸ್ ಠಾಣೆಯ ಸಬ್ ಇನ್ಸ್‌ಪೆಕ್ಟರ್ ಬ್ರಜೇಶ್ ಚೌಹಾಣ್ ಈ ಕುರಿತು ಮಾತನಾಡಿ,ಸಾವಿಗೆ ನಿಜವಾದ ಕಾರಣವನ್ನು ತಿಳಿಯಲು ನಾವು ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದೇವೆ. ದೈಹಿಕ ಹಲ್ಲೆಯಿಂದ ಬಾಲಕ ಮೃತಪಟ್ಟಿದ್ದಾನೆ ಎಂದು ಕುಟುಂಬ ಸದಸ್ಯರು ಆರೋಪಿಸಿದ್ದಾರೆ. ಶಾಲೆಯ ಮಾಲಕರು
ತಲೆಮರೆಸಿಕೊಂಡಿದ್ದಾರೆ. ಈ ಸಂಬಂಧ ದೂರು ದಾಖಲಿಸಿಕೊಂಡಿದ್ದು ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಹೇಳಿದ್ದಾರೆ.

ಟಾಪ್ ನ್ಯೂಸ್