ಮಂಗಳೂರು;ಕಾಂಗ್ರೆಸ್ ಟಿಕೆಟ್ ಕೈತಪ್ಪಿದ ಬೆನ್ನಲ್ಲೇ ಮಾಜಿ ಶಾಸಕ, ಮಂಗಳೂರು ಉತ್ತರ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಆಕಾಂಕ್ಷಿಯಾಗಿದ್ದ ಮೊಯ್ದೀನ್ ಬಾವಾ ಅವರು ಜೆಡಿಎಸ್ ಸೇರ್ಪಡೆಯಾಗುವುದಾಗಿ ಘೋಷಿಸಿದ್ದಾರೆ.
ಜೆಡಿಎಸ್ ಸೇರ್ಪಡೆಯಾಗಿ ಮಂಗಳೂರಿನ ಉತ್ತರ ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯಾಗಿ ಸ್ಪರ್ಧಿಸುವುದಾಗಿ ಹೇಳಿದ್ದಾರೆ.
ಟಿಕೆಟ್ ಗಾಗಿ ಭಾರೀ ಪ್ರಯತ್ನವನ್ನು ನಡೆಸಿದ್ದ ಮೊಯ್ದೀನ್ ಬಾವಾ ಅವರು ಟಿಕೆಟ್ ಕೈತಪ್ಪಿದ ಬಳಿಕ ಫೇಸ್ ಬುಕ್ ಫೇಜ್ ನಲ್ಲಿ ಒಂದು ವಿಡಿಯೋ ಹಂಚಿಕೊಂಡಿದ್ದಾರೆ. ವಿಡಿಯೋದಲ್ಲಿ ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ನಾನು ರಾತ್ರಿ 11ಕ್ಕೆ ಅಭಿಮಾನಿಗಳ ಜೊತೆ ಮಾತುಕತೆ ನಡೆಸುತ್ತೇನೆ.ನಾನು ಈ ರಂಝಾನ್ ಮಾಸದಲ್ಲಿ ಉಪವಾಸ ಹಿಡಿದು ಟಿಕೆಟ್ ಗಾಗಿ ಎಲ್ಲಾ ನಾಯಕರ ಬಳಿ ಬೇಡಿದೆ.
ಮನೆಯಲ್ಲಿ ಕುಳಿತು ಸಣ್ಣ ಸಣ್ಣ ಜಖಾತ್ ಕೊಡುವ ಈ ತಿಂಗಳಿನಲ್ಲಿ ನನಗೇನೆ ಬೇಡುವ ರೀತಿ ಮಾಡಿದ್ರು.ಕಾಂಗ್ರೆಸ್ ನನ್ನನ್ನು ಬಳಸಿಕೊಂಡು ಕೈಬಿಟ್ಟಿದೆ ಎಂದು ಹೇಳಿದ್ದರು.
78% ಜನರು, ಕಾರ್ಯಕರ್ತರು ನನಗೆ ಟಿಕೆಟ್ ಕೊಡಬೇಕೆಂದು ಹೇಳಿದ್ದರು.ಆದರೆ 7% ಬೆಂಬಲ ಇದ್ದವರಿಗೆ ಟಿಕೆಟ್ ಕೊಡಲಾಗಿದೆ. ಎರಡೆರಡು ಭಾರೀ ಭಿ.ಪಾರಂನಿಂದ ನನ್ನ ಹೆಸರನ್ನು ತಪ್ಪಿಸಿದ್ದಾರೆ.ಹಣ ಬಲಕ್ಕೆ ಟಿಕೆಟ್ ನೀಡಲಾಗಿದೆ ಎಂದು ಮೊಯ್ದೀನಾ ಬಾವಾ ಆರೋಪಿಸಿದ್ದಾರೆ.
ಇದರ ಬೆನ್ನಲ್ಲೇ ಮೊಯ್ದೀನ್ ವಾವಾ ಜೆಡಿಎಸ್ ನಿಂದ ಸ್ಪರ್ಧೆ ಎಂಬ ಪೋಸ್ಟರ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿತ್ತು.ಜೊತೆಗೆ ಜೆಡಿಎಸ್ ಗ್ಯಾರೆಂಟಿ ಕಾರ್ಡ್ ಜೊತೆ ಬಾವಾ ಅವರು ಪೋಸ್ ಕೊಡುವ ಪೋಟೋ ವೈರಲ್ ಆಗಿತ್ತು.