ಪತ್ನಿ ತವರು ಮನೆಗೆ ಹೋಗಿದ್ದಕ್ಕೆ ಖಾಸಗಿ ಅಂಗವನ್ನು ಕತ್ತರಿಸಿಕೊಂಡ ಪತಿ

ಬಿಹಾರ;ಪತ್ನಿ ತವರು ಮನೆಯಲ್ಲಿ ಉಳಿದುಕೊಂಡಿದ್ದರಿಂದ ನೊಂದುಕೊಂಡು ವ್ಯಕ್ತಿಯೋರ್ವ ತನ್ನ ಖಾಸಗಿ ಅಂಗವನ್ನು ಕತ್ತರಿಸಿಕೊಂಡಿರುವ ವಿಚಿತ್ರ ಘಟನೆ ಬಿಹಾರದಲ್ಲಿ ನಡೆದಿದೆ.

ಬಿಹಾರದ ಮಾಧೇಪುರ ಪೊಲೀಸ್ ಠಾಣೆ ವ್ಯಾಪ್ತಿಯ ರಜನಿ ನಯಾನಗರ ಪ್ರದೇಶದಲ್ಲಿ ಕೃಷ್ಣ ಬಾಸುಕಿ ಎಂಬಾತ ತನ್ನ ಖಾಸಗಿ ಅಂಗವನ್ನು ಕತ್ತರಿಸಿ ಆಸ್ಪತ್ರೆಗೆ ದಾಖಲಾಗಿದ್ದಾನೆ.

ಗೋಲ್ಪಾರಾ ಪೊಲೀಸ್ ಠಾಣೆ ವ್ಯಾಪ್ತಿಯ ಅನಿತಾ ಎಂಬವರನ್ನು ಕೃಷ್ಣ ಬಾಸುಕಿ ವಿವಾಹವಾಗಿದ್ದನು.ಕೃಷ್ಣ ಪಂಜಾಬ್‌ನ ಮಂಡಿಯಲ್ಲಿ ವಾಸಿಸುತ್ತಾ ಕೆಲಸ ಮಾಡಿಕೊಂಡಿದ್ದನು.ಎರಡು ತಿಂಗಳ ಹಿಂದೆ ರಜನಿ ನಯನಗರದಲ್ಲಿರುವ ನಿವಾಸಕ್ಕೆ ತೆರಳಿದ್ದಳು.

ತವರು ಮನೆಗೆ ಹೋಗಿದ್ದ ಪತ್ನಿ ಹಿಂದಿರುಗಲು ತಡಮಾಡಿದ್ದರಿಂದ ಕೋಪಗೊಂಡ ಕೃಷ್ಣ ತನ್ನ ಖಾಸಗಿ ಅಂಗವನ್ನು ಹರಿತವಾದ ಆಯುಧದಿಂದ ಕತ್ತರಿಸಿಕೊಂಡಿದ್ದಾನೆ.
ರಕ್ತದ ಮಡುವಿನಲ್ಲಿದ್ದ ಆತನಿಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಪ್ರಾಥಮಿಕಿ ವರದಿ ಪ್ರಕಾರ ಆತ ಮಾನಸಿಕ ತೊಂದರೆಯಿಂದ ಬಳಲುತ್ತಿದ್ದ ಎನ್ನಲಾಗಿದೆ.

ಟಾಪ್ ನ್ಯೂಸ್