ಭಟ್ಕಳ:ಭಟ್ಕಳ ಮಾರ್ಕೆಟ್ನಲ್ಲಿ ಅನ್ಯಕೋಮಿನ ಯುವತಿ ಜೊತೆ ಅಸಭ್ಯವಾಗಿ ವರ್ತಿಸಿದ ವಿಚಾರಕ್ಕೆ ಗಲಾಟೆ ನಡೆದಿದೆ.
ಭಟ್ಕಳ ನಗರದ ರಂಜಾನ್ ಮಾರ್ಕೆಟ್ನಿಂದ ಆಟೋದಲ್ಲಿ ತೆರಳಲು ಮುಸ್ಲಿಂ ಯುವತಿ ಆಟೋ ಹತ್ತಿದ್ದಾಳೆ. ಈ ವೇಳೆ ಅಲ್ಲಿಯೇ ಆಟೋ ನಿಲ್ದಾಣದ ಬಳಿಯಿದ್ದ ಕೆಲವು ಯುವಕರು ಯುವತಿಗೆ ಲೈಂಗಿಕ ದೌರ್ಜನ್ಯ ಮಾಡಿದ್ದಾರೆ. ಇದನ್ನು ಗಮನಿಸಿದ ಸ್ಥಳೀಯರು ಬುದ್ದಿವಾದ ಹೇಳಿದ್ದಾರೆ. ಈ ವಿಚಾರಕ್ಕೆ ಇಬ್ಬರ ನಡುವೆ ಗಲಾಟೆ ಶುರುವಾಗಿದ್ದು, ಪೊಲೀಸರು ಸ್ಥಳಕ್ಕಾಗಮಿಸಿ ಲೈಂಗಿಕ ದೌರ್ಜನ್ಯ ನಡೆಸಿದ ಯುವಕರನ್ನು ಬಂಧಿಸಿ ಪೊಲೀಸ್ ವಾಹನದಲ್ಲಿ ಠಾಣೆಗೆ ಕರೆದೊಯ್ದಿದ್ದಾರೆ.
ಈ ವೇಳೆ ಆರೋಪಿಗಳನ್ನು ಕರೆದುಕೊಂಡು ಹೋಗುವಾಗ
ಕೆಲ ಯುವಕರು ಪೊಲೀಸ್ ಜೀಪ್ ಗೆ ಅಡ್ಡಿ ಪಡಿಸಿದ್ದಾರೆ.
ಈ ಕುರಿತು ಭಟ್ಕಳ ಶಹರಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನೆಯಲ್ಲಿ ಏಳು ಜನರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಹದ್ಲೂರು ನಿವಾಸಿ ಚಂದ್ರು ಗೊಂಡ, ಸರ್ಪನಕಟ್ಟೆಯ ರವೀಂದ್ರ ನಾಯ್ಕ್ ಮಹಿಳೆಯೊಂದಿಗೆ ಅಸಭ್ಯವಾಗಿ ವರ್ತಿಸಿದ್ದಾರೆ. ಜೊತೆಗೆ ಪೊಲೀಸ್ ವಾಹನ ತಡೆದು ಕರ್ತವ್ಯಕ್ಕೆ ಅಡ್ಡಿಪಡಿಸಿದ ಸುಲ್ತಾನ್ ಸ್ಟ್ರೀಟ್ನ ಮೊಹ್ಮದ್ ಮೀರಾ,ಮೊಹ್ಮದ್ ಇಮ್ರಾನ್ ಶೇಖ್ ಸೇರಿ ಐವರ ವಿರುದ್ದ ಸಹ ಪ್ರಕರಣ ದಾಖಲಾಗಿದೆ.