ಭಟ್ಕಳ; ಒಂದೇ ಮನೆಯಲ್ಲಿ ನಾಲ್ವರ ಹತ್ಯೆ ಕೇಸ್ ನಲ್ಲಿ ಬೆಳವಣಿಗೆ, ಆರೋಪಿ ಅರೆಸ್ಟ್

ಭಟ್ಕಳ;ತಾಲೂಕಿನ ಹಾಡವಳ್ಳಿಯ ಓಣಿಬಾಗಿಲು ಗ್ರಾಮದಲ್ಲಿ ನಡೆದ ಒಂದೇ ಕುಟುಂಬದ ನಾಲ್ವರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ಆರೋಪಿಯನ್ನು ಭಟ್ಕಳ ಪೊಲೀಸರು ಶಿವಮೊಗ್ಗದಲ್ಲಿ ಬಂಧಿಸಿದ್ದಾರೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಈ ಮೊದಲು ಕೊಲೆಯಾದವರ ಸೊಸೆ ವಿದ್ಯಾ ಭಟ್ ಹಾಗೂ ಶ್ರೀಧರ್ ಭಟ್​ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಆರೋಪಿ ವಿನಯ್​ ಭಟ್ ಪರಾರಿಯಾಗಿದ್ದ. ನಿನ್ನೆ ಆತ ಇರುವ ಖಚಿತ ಮಾಹಿತಿ ಮೇರೆಗೆ ಆರೋಪಿ ವಿನಯ್​ ಭಟ್​ನನ್ನು ಭಾನುವಾರ ಶಿವಮೊಗ್ಗದಲ್ಲಿ ಬಂಧಿಸಿ ಭಟ್ಕಳಕ್ಕೆ ಕರೆತಂದಿದ್ದಾರೆ.

ಫೆಬ್ರವರಿ 24ರಂದು ಆಸ್ತಿ ವಿಚಾರಕ್ಕಾಗಿ ಹಾಡವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಒಂದೇ ಕುಟುಂಬದ ನಾಲ್ವರನ್ನು ಬರ್ಬರವಾಗಿ ಹತ್ಯೆ ಮಾಡಲಾಗಿತ್ತು.ಪ್ರಕರಣ ಇಡೀ ರಾಜ್ಯವನ್ನೇ ಬೆಚ್ಚಿಬೀಳಿಸಿತ್ತು.

ಟಾಪ್ ನ್ಯೂಸ್

ಬೆಂಗಳೂರು; ಮದುವೆಯಾಗಿ ಪತಿ ಮನೆಗೆ ಹೋದ ಯುವತಿ, ಮೊದಲ ದಿನವೇ ಲಿಪ್ ಸ್ಟಿಕ್ ಹಾಕಿ ನನಗೂ ಗಂಡು ಬೇಕು ಎಂದ ವರ! ಕಂಗಾಲಾಗಿ ಪೊಲೀಸರಿಗೆ ದೂರು‌ ನೀಡಿದ ಯುವತಿ

ಬೆಂಗಳೂರು:ಪತಿ ಮಹಿಳೆಯರಂತೆ ಲಿಪ್ ಸ್ಟಿಕ್ ಹಾಕುತ್ತಾನೆ, ತನ್ನ ಒಳ ಉಡುಪು ಧರಿಸುತ್ತಾನೆ ಎಂದು

BIG NEWS ಜಾನುವಾರ ಸಾಗಾಟ ಮಾಡುತ್ತಿದ್ದ ವ್ಯಕ್ತಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆ, ವಾಹನ ತಡೆದು ಜಾನುವಾರ ರಕ್ಷಿಸಿದ್ದ ಪುನೀತ್ ಕೆರೆಹಳ್ಳಿ ಟೀಂ! ಸಂತ್ರಸ್ತ ಕುಟುಂಬದಿಂದ ಪುನೀತ್ ಕೆರೆಹಳ್ಳಿ ಬಂಧಿಸುವಂತೆ ಪ್ರತಿಭಟನೆ

ರಾಮನಗರ:ಕಸಾಯಿಖಾನೆಗೆ ಜಾನುವಾರು ಸಾಗಣೆ ಮಾಡುತ್ತಿದ್ದಾಗ ಹಿಂದೂ ಕಾರ್ಯಕರ್ತರು ದಾಳಿ ಮಾಡಿ ಜಾನುವಾರ ವಶಪಡಿಸಿಕೊಂಡಿದ್ದಾರೆ

Developed by eAppsi.com