ಭಟ್ಕಳ:ಬಾಲಕನ ಅಪಹರಣ ಪ್ರಕರಣಕ್ಕೆ ಸಂಬಂಧಿಸಿ ಮೂವರು ಅರೆಸ್ಟ್;ಕಿಡ್ನಾಪ್ ಗೆ ಸುಪಾರಿ ಕೊಟ್ಟಿದ್ದು ಸಂಬಂಧಿ!
ಭಟ್ಕಳ:ಭಟ್ಕಳ ಅಂಗಡಿಗೆ ಬ್ರೆಡ್ ತರಲೆಂದು ಹೋಗಿದ್ದ 8 ವರ್ಷದ ಬಾಲಕನ ಕಿಡ್ನಾಪ್ ಕೇಸ್ ಗೆ ಸಂಬಂಧಿಸಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.
ಅಲಿ ಇಸ್ಲಾಂ ಸಾದಾ(8)ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು,ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು.
ಮುಹಮ್ಮದ್ ಅನೀಸ್,ಅಬ್ರಾರ್ ಶೇಖ್,ಮುಹಮ್ಮದ್ ಬಂಧಿತರು.ಮೂವರು ಆರೋಪಿಗಳು ಬಾಲಕನ ತಾಯಿಯ ಮಾವನ ಸೂಚನೆಯಂತ ಅಪಹರಿಸಿದ್ದರು.ಈ ಕೇಸ್ ನ ಮುಖ್ಯ ಆರೋಪಿ ಬಾಲಕನ ತಾಯಿಯ ಮಾವ ಈಗ ಸೌದಿಯಲ್ಲಿದ್ದಾರೆ.ಅಲ್ಲೆ ನಿಂತುಕೊಂಡು ಬಾಲಕನ ಕಿಡ್ನಾಪ್ ಗೆ ಸೂಚಿಸಿದ್ದರು ಎನ್ನಲಾಗಿದೆ.
ಇದೀಗ ಆರೋಪಿಗಳನ್ನು ಬಂಧಿಸಿದ ಪೊಲೀಸರು ಬಾಲಕನ ಅಪಹರಣಕ್ಕೆ ಬಳಸಿದ ಕಾರು ಹಾಗೂ ಚಾಕುವನ್ನು ವಶಕ್ಕೆ ಪಡೆದುಕೊಂಡಿದ್ದಾರೆ.