ಭಟ್ಕಳ; ಕಿಡ್ನಾಪ್ ಆಗಿದ್ದ ಬಾಲಕ ಪತ್ತೆ!: ಸಿಸಿಟಿವಿಯಲ್ಲಿ ಕಿಡ್ನಾಪ್ ದೃಶ್ಯ ದಾಖಲು ಬಳಿಕ ಭಾರೀ ಸುದ್ದಿಯಾಗಿದ್ದ ಪ್ರಕರಣ
ಭಟ್ಕಳ;ಕಿಡ್ನಾಪ್ ಆಗಿದ್ದ ಬಾಲಕ ಪತ್ತೆ!:ಸಿಸಿಟಿವಿಯಲ್ಲಿ ಕಿಡ್ನಾಪ್ ದೃಶ್ಯ ದಾಖಲು ಬಳಿಕ ಭಾರೀ ಸುದ್ದಿಯಾಗಿದ್ದ ಪ್ರಕರಣ

ಭಟ್ಕಳ;ಭಟ್ಕಳದಲ್ಲಿ‌ ಅಂಗಡಿಗೆ ಬ್ರೆಡ್ ತರಲೆಂದು ಹೋಗಿದ್ದ 8 ವರ್ಷದ ಬಾಲಕನ‌ನಾಪತ್ತೆ ಪ್ರಕರಣ ಸುಖಾಂತ್ಯವಾಗಿದ್ದು ಬಾಲಕ ಗೋವಾದಲ್ಲಿ ಪತ್ತೆಯಾಗಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.

ಅಲಿ ಇಸ್ಲಾಂ ಸಾದಾ(8) ಎಂಬ ಬಾಲಕ ಎರಡು ದಿನಗಳ ಹಿಂದೆ ಅಪಹರಣಕ್ಕೊಳಗಾಗಿದ್ದು,ಬಾಲಕನನ್ನು ಕಾರಿನಲ್ಲಿ ಬಂದು ಕಿಡ್ನಾಪ್ ಮಾಡುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿತ್ತು

ಈ ಕುರಿತು ಕಾರ್ಯಚರಣೆ ನಡೆಸಿದ ಭಟ್ಕಳ ನಗರ ಠಾಣೆ ಪೊಲೀಸರು ಇದೀಗ ಬಾಲಕನನ್ನು ಗೋವಾದಲ್ಲಿ ಪತ್ತೆ ಮಾಡಿ ರಕ್ಷಿಸಿದ್ದಾರೆ.

ಕೌಟುಂಬಿಕ ದ್ವೇಷದಿಂದ ಬಾಲಕನ ಅಪಹರಣ ಮಾಡಲಾಗಿದೆ ಎಂದು ತನಿಖೆಯಿಂದ ತಿಳಿದು ಬಂದಿದೆ.ಟಾಪ್ ನ್ಯೂಸ್