ಬೆಳ್ತಂಗಡಿ; ಆಟೋ ರಿಕ್ಷಾದಲ್ಲಿ ಕರೆದೊಯ್ದು ಬಾಲಕಿಗೆ ಲೈಂಗಿಕ ದೌರ್ಜನ್ಯ, ಆಟೋ ಚಾಲಕ ಸೇರಿ ಇಬ್ಬರ ಬಂಧನ

-ಸಾದಿಕ್ ಮತ್ತು ಕರೀಂ ಬಂಧಿತರು

ಬೆಳ್ತಂಗಡಿ: ಅಪ್ರಾಪ್ತ ಬಾಲಕಿಯನ್ನು ಬಲವಂತವಾಗಿ ಆಟೋ ರಿಕ್ಷಾದಲ್ಲಿ ಕರೆದೊಯ್ದು ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಮೇಲೆ ಇಬ್ಬರ ವಿರುದ್ಧ ಪೋಕ್ಸೋ ಕಾಯ್ದೆಯಡಿ ಕೇಸ್ ದಾಖಲಾಗಿರುವ ಘಟನೆ ನಡೆದಿದೆ.

ಆಟೋ ರಿಕ್ಷಾ ಚಾಲಕ ಸಾದಿಕ್ ಮತ್ತು ಸ್ಥಳೀಯ ನಿವಾಸಿ ಕರೀಂ ಅವರನ್ನು ಪೊಲೀಸರು ಬಂಧಿತರು. ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, 15 ದಿನಗಳ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ನೆರೋಲ್ದಪಲ್ಕೆ ಎಂಬಲ್ಲಿ ಜೂನ್ 18 ರಂದು ಬಾಲಕಿ ತನ್ನ ತಾಯಿ ಪಡೆದ ಸಾಲದ ಕಂತು ಪಾವತಿಸಲು ಸ್ವಸಹಾಯ ಸಂಘದ ಕಡೆಗೆ ನಡೆದುಕೊಂಡು ಹೋಗುತ್ತಿದ್ದಳು. ಈ ವೇಳೆ ಬಾಲಕಿಯ ಕುಟುಂಬಕ್ಕೆ ಪರಿಚಯವಿರುವ ಕರೀಂ ಬಾಲಕಿಯನ್ನು ರಿಕ್ಷಾಗೆ ಹತ್ತಿಸಿದ್ದಾನೆ. ಬಳಿಕ ಆಟೋ ಚಾಲಕ ಸಾದಿಕ್ ಜೊತೆ ಸೇರಿ ಕರೀಂ ಬಾಲಕಿಗೆ ಲೈಂಗಿಕ ಕಿರುಕುಳ ನೀಡಲು ಯತ್ನಿಸಿದ್ದಾನೆ.

ಕರೀಂ ಸಂತ್ರಸ್ತ ಬಾಲಕಿಗೆ 200 ರೂ ನೀಡಿ ತನ್ನೊಂದಿಗೆ ಆಟೋ ರಿಕ್ಷಾದಲ್ಲಿ ಬೆಳ್ತಂಗಡಿಗೆ ಬರುವಂತೆ ಆಮಿಷ ಒಡ್ಡಿ ಕಿರುಕುಳ ನೀಡಿದ್ದಾನೆ. ಸಂತ್ರಸ್ತ ಬಾಲಕಿ ಇದನ್ನು ವಿರೋಧಿಸಿ ಆಟೋ ರಿಕ್ಷಾದಿಂದ ಜಿಗಿದಿದ್ದಾಳೆ.ಈ ವೇಳೆ ಆಕೆಯ ಕೈ ಮತ್ತು ಕಾಲುಗಳಿಗೆ ಗಾಯಗಳಾಗಿವೆ.

ಬಾಲಕಿ ವಾಹನದಿಂದ ಜಿಗಿದ ಬಳಿಕ ಆರೋಪಿಗಳು ಸ್ಥಳದಿಂದ ಪರಾರಿಯಾಗಿದ್ದರು.ಈ ಕುರಿತು ಸಂತ್ರಸ್ತ ಬಾಲಕಿ ಧರ್ಮಸ್ಥಳ ಠಾಣೆಗೆ ದೂರು ನೀಡಿದ್ದರು.

ಟಾಪ್ ನ್ಯೂಸ್