ಮಸ್ಕತ್;ಬೆಳ್ತಂಗಡಿ ಮೂಲದ ಯುವತಿಯೋರ್ವರು ಮಸ್ಕತ್ ನಲ್ಲಿ ಹೃದಯಾಘಾತದಿಂದ ಮೃತಪಟ್ಟ ಘಟನೆ ನಡೆದಿದೆ.
ಬೆಳ್ತಂಗಡಿಯ ಕಕ್ಕಿಂಜೆ ನೆರಿಯ ಬಲಿಪಾಯಿ ನಿವಾಸಿ ಮೂಸೆಕುಂಞ ಅವರ ಪುತ್ರಿ ನುಸೈಬಾ(30) ಮೃತ ಯುವತಿ.
ನುಸೈಬಾ ಗೆ ಬಿಸಿರೋಡ್ ನಿವಾಸಿ ಶಕೀಬ್ ಜೊತೆ 6 ವರ್ಷಗಳ ಹಿಂದೆ ವಿವಾಹವಾಗಿತ್ತು.ದಂಪತಿಗೆ ಇಬ್ಬರು ಮಕ್ಕಳಿದ್ದಾರೆ.ಸಂಸಾರವು ಚೆನ್ನಾಗಿಯೇ ನಡೆಯುತ್ತಿತ್ತು.
ಇಂದು ಬೆಳಿಗ್ಗೆ ಮಸ್ಕತ್ ನಲ್ಲಿ ರೂಂ ನಲ್ಲಿ 5 ಗಂಟೆಗೆ ಎದ್ದು ನುಸೈಬ ಎಂದಿನಂತೆ ಪತಿಗೆ ಕೆಲಸಕ್ಕೆ ಕಳುಹಿಸಿದ್ದರು. ಬಳಿಕ 7 ಗಂಟೆಗೆ ಮೊದಲ ಶಿಪ್ಟ್ ಮುಗಿಸಿ ಪತಿ ರೂಂಗೆ ಬಂದು ನೋಡಿದಾಗ ಪತ್ನಿ ಪ್ರಜ್ಞೆ ಕಳೆದುಕೊಂಡಿದ್ದರು. ಬಳಿಕ ವೈದ್ಯರನ್ನು ಕರೆಸಿ ಪರಿಶೀಲಿಸಿದಾಗ ಮೃತಪಟ್ಟಿರುವುದು ತಿಳಿದು ಬಂದಿದೆ.ಹೃದಯಾಘಾತದಿಂದ ಮೃತಪಟ್ಟಿರುವ ಬಗ್ಗೆ ವೈದ್ಯರು ಮಾಹಿತಿ ನೀಡಿದ್ದಾರೆ.
ನುಸೈಬಾ ಪತಿಯ ಬಳಿ ಮಸ್ಕತ್ ಗೆ ಒಂದು ವರ್ಷಗಳ ಹಿಂದೆ ತೆರಳಿದ್ದರು ಎನ್ನಲಾಗಿದೆ. ಮೃತದೇಹ ಊರಿಗೆ ಕರೆ ತರುವ ಬಗ್ಗೆ ಕಾರ್ಯ ಚಟುವಟಿಕೆ ನಡೆಯುತ್ತಿದೆ ಎಂದು ಕುಟುಂಬದ ಮೂಲಗಳು ತಿಳಿಸಿದೆ.