ಬೆಳ್ತಂಗಡಿ:ಬೆಳ್ತಂಗಡಿಯಲ್ಲಿ ಬಿಜೆಪಿ ನಾಯಕನೋರ್ವ ಹರೀಶ್ ಪೂಂಜಾ ಅವರ ಪರ ತಡರಾತ್ರಿಯಲ್ಲಿ ಹಣ ಹಂಚಿಕೆ ಮಾಡುತ್ತಿದ್ದಾಗ ಸಿಕ್ಕಿ ಬಿದ್ದ ಘಟನೆ ನಡೆದಿದೆ.
ಪಟ್ಟಣ ಪಂಚಾಯಿತಿ ಉಪಾಧ್ಯಕ್ಷ ಜಯನಂದ ಗೌಡ ಅವರು ಕೆಲ್ಲಗುತ್ತು ಕಾಲೋನಿಯಲ್ಲಿ ಹಣ ಹಂಚುವಾಗ ರೆಡ್ ಹ್ಯಾಂಡ್ ಆಗಿ ಕಾಂಗ್ರೆಸ್ ಮಾಜಿ ಶಾಸಕ ವಸಂತ ಬಂಗೇರ ಅವರ ತಂಡಕ್ಕೆ ಸಿಕ್ಕಿಬಿದ್ದಿದ್ದಾರೆ.ಸ್ಥಳದಲ್ಲಿ ಮಾತಿನ ಚಕಮಕಿ ನಡೆದು ಹೈಡ್ರಾಮವೇ ನಡೆದಿದೆ.
ಇನ್ನು ಬಿಜೆಪಿ ನಾಯಕರು ನಂಬರ್ ಪ್ಲೇಟ್ ಇಲ್ಲದ ಕಾರಿನಲ್ಲಿ ಹಣ ಹಂಚುತ್ತಿದ್ದು, ಅವರನ್ನು ಚುನಾವಣಾಧಿಕಾರಿಗಳಿಗೆ ಮಾಜಿ ಶಾಸಕ ಕೆ ವಸಂತ ಬಂಗೇರ ಒಪ್ಪಿಸಿದ್ದಾರೆ. ಹರೀಶ್ ಪೂಂಜಾ ಪರವಾಗಿ ಇವರು ಹಣ ಹಂಚಿಕೆ ಮಾಡಿ ಮತವನ್ನು ಕೊಂಡು ಕೊಳ್ಳಲು ಮುಂದಾಗಿದ್ದಾರೆಂದು ಕಾಂಗ್ರೆಸ್ ಆರೋಪಿಸಿದೆ.
ಘಟನಾ ಸ್ಥಳದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗಿದೆ.ಅಧಿಕಾರಿಗಳು ಹಣವನ್ನು ಲೆಕ್ಕಾಚಾರ ಮಾಡಿ ವಶಕ್ಕೆ ತೆಗೆದುಕೊಂಡಿದ್ದಾರೆ.