ಬೆಳ್ತಂಗಡಿ;ಮರ ಕಡಿಯುವಾಗ ತಲೆಗೆ ಆಕಸ್ಮಿಕವಾಗಿ ಮರ ಬಿದ್ದು ಮಹಿಳೆ ಮೃತಪಟ್ಟ ಘಟನೆ ಧರ್ಮಸ್ಥಳದ ಕೊಕ್ಕಡ ಎಂಬಲ್ಲಿ ನಡೆದಿದೆ.
ಮೃತರನ್ನು ಕೊಕ್ಕಡ ಗ್ರಾಮದ ಹಳ್ಳಿಂಗೇರಿ ನಿವಾಸಿ ದಾಮೋದರ ಆಚಾರ್ಯ ಎಂಬವರ ಪತ್ನಿ ಗಾಯತ್ರಿ ಎಂದು ಗುರುತಿಸಲಾಗಿದೆ.
ಮರ ಕಡಿಯುತ್ತಿದ್ದ ವೇಳೆ ಗಾಯತ್ರಿಯ ತಲೆಗೆ ಆಕಸ್ಮಿಕವಾಗಿ ಮರ ಬಿದ್ದು ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ ಎನ್ನಲಾಗಿದೆ.
ಮರ ಕಡಿಯುವಾಗ ಗಾಯತ್ರಿಯ ತಲೆಗೆ ಮರದ ತುಂಡು ಬಿದ್ದು ದರ್ಘಟನೆ ನಡೆದಿದೆ. ಕ್ವಾರ್ಟಸ್ ಬಳಿ ಮರವೊಂದರ ಗೆಲ್ಲುಗಳನ್ನು ತೆಗೆಯುವ ವೇಳೆ ಘಟನೆ ನಡೆದಿದೆ.