ಬೆಳ್ತಂಗಡಿ; ಕಾರು & ರಿಕ್ಷಾ ನಡುವೆ ಭೀಕರ ಅಪಘಾತ, ಮಗು ಸೇರಿ ಐವರಿಗೆ ಗಂಭೀರ ಗಾಯ

ಬೆಳ್ತಂಗಡಿ:ಕಾರು ಮತ್ತು ರಿಕ್ಷಾ ನಡುವೆ ಮುಖಾಮುಖಿ ಢಿಕ್ಕಿಯಾಗಿ ಐವರು ಗಂಭೀರ ಗಾಯಗೊಂಡ ಘಟನೆ
ಬೆಳ್ತಂಗಡಿಯ ಪೆರಿಂಜೆ ಬಳಿ ನಡೆದಿದೆ.

ತುಮಕೂರು ಮೂಲದ ಕುಟುಂಬ ಧರ್ಮಸ್ಥಳ ಕ್ಷೇತ್ರದ ದರ್ಶನ ಮುಗಿಸಿ ಕಟೀಲು ಕ್ಷೇತ್ರದ ಕಡೆಗೆ ಕಾರಿನಲ್ಲಿ ತೆರಳುವಾಗ ಪೆರಿಂಜೆ ಬಳಿ ಕಾಂನ್ನಂಗಾರ್ ನಿಂದ ಗೇರುಕಟ್ಟೆ ತೆರಳುತ್ತಿದ್ದ ರಿಕ್ಷಾ ಮುಖಾಮುಖಿಯಾಗಿ ಢಿಕ್ಕಿಯಾಗಿದೆ.

ಅಪಘಾತದ ರಭಸಕ್ಕೆ ರಿಕ್ಷಾದಲ್ಲಿದ್ದ ಇಬ್ಬರು ಯುವತಿಯರು, ಮಗು ಹಾಗೂ ಓರ್ವ ಮಹಿಳೆ ಸೇರಿ ಐವರಿಗೆ ಗಾಯವಾಗಿದೆ. ಘಟನೆಯಲ್ಲಿ ಮಗುವಿನ ಸ್ಥಿತಿ ಚಿಂತಾಜನಕವಾಗಿದೆ ಎಂದು ಹೇಳಲಾಗಿದೆ.ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಇನ್ನು ಕಾರಿನಲ್ಲಿದ್ದವರು ಅಪಾಯದಿಂದ ಪಾರಾಗಿದ್ದಾರೆ ಎಂದು ತಿಳಿದು ಬಂದಿದೆ.ಈ ಕುರಿತು ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

ಟಾಪ್ ನ್ಯೂಸ್

ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತ; ಕರಾವಳಿ ಜಿಲ್ಲೆಗೆ ಚಂಡಮಾರುತದ ಭೀತಿ, ಬಿರುಗಾಳಿ ಮಳೆ ಎಚ್ಚರಿಕೆ ನೀಡಿದ ಹವಾಮಾನ ಇಲಾಖೆ

ಉಡುಪಿ;ಅರಬ್ಬೀ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿದ್ದು, ಕರವಾಳಿ ಜಿಲ್ಲೆಗಳಿಗೆ ಚಂಡಮಾರುತದ ಭೀತಿ ಎದುರಾಗಿದೆ. ಅರಬ್ಬಿ

ಮಂಗಳೂರಿನಲ್ಲಿ ನೈತಿಕ ಪೊಲೀಸ್ ಗಿರಿ ತಡೆಗೆ “ಆ್ಯಂಟಿ ಕಮ್ಯುನಲ್‌ ವಿಂಗ್” ಸ್ಥಾಪನೆ; ಹೇಗಿರಲಿದೆ ಇದರ ರೂಪುರೇಷೆ? ಗೃಹಸಚಿವರು ಹೇಳಿದ್ದೇನು?

ಮಂಗಳೂರು:ನೈತಿಕ ಪೊಲೀಸ್ ಗಿರಿ ತಡೆಗೆ ಮಂಗಳೂರು ನಗರದಲ್ಲಿ ಆ್ಯಂಟಿ ಕಮ್ಯುನಲ್‌ ವಿಂಗ್ ಆರಂಭಿಸಲು

Developed by eAppsi.com