ಬೆಳ್ತಂಗಡಿ;ಶಾಲಾ ವಿದ್ಯಾರ್ಥಿನಿಯೊಬ್ಬಳು ಮೃತಪಟ್ಟ ಘಟನೆ ನಿನ್ನೆ ಗೇರುಕಟ್ಟೆಯಲ್ಲಿ ಸಂಭವಿಸಿದೆ.
ಕುಪ್ಪೆಟ್ಟಿ ನಿವಾಸಿ ಅಬ್ದುರ್ರಝಾಕ್ ಎಂಬವರ ಪುತ್ರಿ ಆಸಿಫಾ(16) ಮೃತಪಟ್ಟ ಬಾಲಕಿ.ಈಕೆ ಗೇರುಕಟ್ಟೆಯಲ್ಲಿ ಕಲಿಯುತ್ತಿದ್ದಳು.
ನಿನ್ನೆ ಬೆಳಗ್ಗೆ ಗೇರುಕಟ್ಟೆಯಲ್ಲಿ ಬಸ್ಸಿನಿಂದ ಇಳಿದು ಶಾಲೆಗೆಂದು ತೆರಳುತ್ತಿದ್ದ ಆಸಿಫಾ ಅಲ್ಲೇ ಸಮೀಪದ ಮನೆಯೊಂದಕ್ಕೆ ತೆರಳಿ ಶೌಚಾಲಯಕ್ಕೆ ಹೋಗಿದ್ದಾಳೆನ್ನಲಾಗಿದೆ.ಆದರೆ ಈಕೆ ಶಾಚಾಲಯದಿಂದ ಹೊರ ಬರದಿರುವುದನ್ನು ಗಮನಿಸಿದ ಮನೆಮಂದಿ ಸ್ಥಳೀಯ ಗ್ರಾಪಂ ಸದಸ್ಯರ ಸಹಾಯದಿಂದ
ಶೌಚಾಲಯದ ಬಾಗಿಲು ಮುರಿದು ನೋಡಿದಾಗ ವಿದ್ಯಾರ್ಥಿನಿ ನರಳಾಡುತ್ತಿರುವುದು ಕಂಡುಬಂದಿದೆ.
ಕೂಡಲೇ ಆಕೆಯನ್ನು ಗುರುವಾಯನಕೆರೆ ಖಾಸಗಿ ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಅಷ್ಟರಲ್ಲಿ ಆಕೆ ಮೃತಪಟ್ಟಿದ್ದಳು ಎಂದು ತಿಳಿದುಬಂದಿದೆ.
ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿ ಪರಿಶೀಲನೆ ನಡೆಸಿದ್ದಾರೆ.