ಬೆಳ್ತಂಗಡಿಯಲ್ಲಿ ನಿರ್ಮಾಣವಾಗಲಿದೆ 100 ಕೋಟಿ ವೆಚ್ಚದಲ್ಲಿ ವಿಮಾನ ನಿಲ್ಧಾಣ!

ಬೆಳ್ತಂಗಡಿ;ಬೆಳ್ತಂಗಡಿಯಲ್ಲಿ ಮಿನಿ ವಿಮಾನ ನಿಲ್ದಾಣ ನಿರ್ಮಿಸಲಾಗುವುದು ಎಂದು ಎಂದು ವಸತಿ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ಅವರು ಹೇಳಿದ್ದಾರೆ.

ಧರ್ಮಸ್ಥಳ ಭಾಗದಲ್ಲಿ ನಾಲ್ಕು ಹೆಲಿಕಾಪ್ಟರ್‌ಗಳು ಏಕಕಾಲದಲ್ಲಿ ಲ್ಯಾಂಡಿಂಗ್ ಆಗಲು ನೆರವಾಗುವಂತೆ ವಿಮಾನ ನಿಲ್ಧಾಣ ನಿರ್ಮಾಣ ಮಾಡುವುದಾಗಿ ಹೇಳಿದ್ದಾರೆ‌‌‌‌.

ರಾಜ್ಯಸಭಾ ಸದಸ್ಯ,ಧರ್ಮಸ್ಥಳದ ಧರ್ಮಾಧಿಕಾರಿ ಡಿ.ವೀರೇಂದ್ರ ಹೆಗ್ಗಡೆ ಮತ್ತು ಬೆಳ್ತಂಗಡಿ ಶಾಸಕ ಹರೀಶ್ ಪೂಂಜ ಅವರ ಕೋರಿಕೆಯಂತೆ ಪ್ರಸ್ತಾವಿತ ಯೋಜನೆಯನ್ನು ಕಾರ್ಯಗತಗೊಳಿಸಲು ಉದ್ದೇಶಿಸಲಾಗಿದೆ. ಇದಕ್ಕಾಗಿ 100 ಎಕರೆ ಜಮೀನಿದ ಅಗತ್ಯವಿದೆ. ಈ ಬಗ್ಗೆ ಮುಖ್ಯಮಂತ್ರಿ ಹಾಗೂ ಸಂಬಂಧಪಟ್ಟ ಇಲಾಖೆಯ ಮೇಲಧಿಕಾರಿಗಳ ಜತೆ ವಾರದೊಳಗೆ ಚರ್ಚಿಸಿ 100 ಕೋಟಿಯ ಡಿಪಿಆರ್‌ ಸಿದ್ಧಪಡಿಸಿ ಸಚಿವ ಸಂಪುಟದ ಮುಂದೆ ಇಡಲಾಗುವುದು ಎಂದು ಸಚಿವ ಸೋಮಣ್ಣ ಹೇಳಿದ್ದಾರೆ.

ಇದರ ಬೆನ್ನಲ್ಲೇ‌ ಜನಸಾಮಾನ್ಯರು ಏರ್ ಪೋರ್ಟ್ ‌ಯಾರಿಗೆ? ಜನಸಮಾನ್ಯನಿಗೆ ಇದರಿಂದ ಏನು ಪ್ರಯೋಜನ? ಬೆಳ್ತಂಗಡಿಯಲ್ಲಿ ಮಧ್ಯಮ ಮತ್ತು ಕೆಳವರ್ಗದವರೇ ಅಧಿಕ ಇರುವುದು ಇವರಿಗೆ ಏರ್ ಪೋರ್ಟ್ ನಿಂದ ಏನು ಪ್ರಯೋಜನ‌ ಎಂದು ಪ್ರಶ್ನಿಸಿದ್ದಾರೆ.ಬೆಳ್ತಂಗಡಿಯಿಂದ ಉಜಿರೆ ತೆರಳುವ ರಸ್ತೆ ಹದಗೆಟ್ಟಿದೆ,ರಸ್ತೆಗಳಲ್ಲಿ ಗುಂಡಿಗಳು ಬಿದ್ದುಕೊಂಡಿದೆ.ಬೆಳ್ತಂಗಡಿಯಿಂದ ಉಜಿರೆ ರಸ್ತೆಯಲ್ಲಿ ವಾಹನಗಳ ದಟ್ಟಣೆ ಕೂಡ ಹೆಚ್ಚಳವಾಗಿದೆ.‌ದಿನ‌‌ನಿತ್ಯ ಬಡವರು,ಮಧ್ಯಮವರ್ಗದ ಜನರು ಇದೇ ರಸ್ತೆಯಲ್ಲಿ ಧರ್ಮಸ್ಥಳಕ್ಕೆ‌ ತೆರಳುತ್ತಾರೆ.ಇವುಗಳಿಗೆ ಸರಿಯಾದ ಪರಿಹಾರ ಸೂಚಿಸದೆ ಏರ್ಪೋರ್ಟ್ ಯಾರಿಗೆ ಎಂದು ಜನಸಾಮಾನ್ಯರು ಪ್ರಶ್ನಿಸಿದ್ದಾರೆ.

ಟಾಪ್ ನ್ಯೂಸ್

ಅಮೆರಿಕಾದಲ್ಲಿ ಭಾರತೀಯ ವಿದ್ಯಾರ್ಥಿಗೆ ಕೂಡಿ ಹಾಕಿ ಚಿತ್ರಹಿಂಸೆ; ವಿಧ್ಯಾಭ್ಯಾಸಕ್ಕೆಂದು ಕರೆದುಕೊಂಡು ಹೋಗಿ ಮನೆಗೆಲಸ ಮಾಡುವಂತೆ ಬಲವಂತ!

7 ತಿಂಗಳುಗಳಿಂದ ಬಾತ್ರೂಮ್​ನಲ್ಲಿ ಬಂಧಿಯಾಗಿದ್ದ 20 ವರ್ಷದ ಭಾರತೀಯ ವಿದ್ಯಾರ್ಥಿಯನ್ನು ಅಮೆರಿಕಾದ ಅಧಿಕಾರಿಗಳು