ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಮಸೂದ್ ಕುಟುಂಬಕ್ಕೆ ಮನೆ ಹಸ್ತಾಂತರ

ಬೆಳ್ಳಾರೆ;ದುಷ್ಕರ್ಮಿಗಳಿಂದ ಹತ್ಯೆಗೀಡಾಗಿದ್ದ ಮಸೂದ್ ಕುಟುಂಬಕ್ಕೆ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಹಾಗೂ ಸುಳ್ಯ ತಾಲೂಕು ಜಮಾಅತ್ ಸಮಿತಿ ವತಿಯಿಂದ ನೂತನ ಮನೆ ಹಸ್ತಾಂತರ ಮಾಡಲಾಗಿದೆ‌.

ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ದುಷ್ಕರ್ಮಿಗಳು ಮಸೂದ್ ನನ್ನು ಹತ್ಯೆ ಮಾಡಿದ್ದರು.

ಮಸೂದ್ ಕುಟುಂಬಕ್ಕೆ ದ.ಕ.ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ.ಎಸ್. ಮಹಮ್ಮದ್ ಮಸೂದ್ ಹಸ್ತಾಂತರ ಮಾಡಿದ್ದು, ಈ ವೇಳೆ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರಾದ ಮಾಜಿ ಮೇಯರ್ ಅಶ್ರಫ್, ಪುತ್ತುಬಾವ ಹಾಜಿ, ಹಾಜಿ ಕೆ. ಪಿ. ಅಹ್ಮದ್ ಆಕರ್ಷನ್ ಪುತ್ತೂರು, ಸಂಘಟನಾ ಕಾರ್ಯದರ್ಶಿಗಳಾದ ಎಸ್. ಸಂಶುದ್ದೀನ್ ಸುಳ್ಯ, ಅಬ್ದುಲ್ ರೆಹಮಾನ್ ಆಜಾದ್ ಸೇರಿ ಹಲವು ದಾನಿಗಳು ಇದ್ದರು.

ಟಾಪ್ ನ್ಯೂಸ್