ಪಬ್ಲಿಕ್ ನಲ್ಲಿ ಪಕ್ಕಾ ಪೊಲೀಸರಂತೆ ತಪಾಸಣೆ ಮಾಡುತ್ತಿದ್ದ ಐವರು ನಕಲಿ ಪೊಲೀಸರp ಬಂಧನ;ಇವರು ಸಿಕ್ಕಿಬಿದ್ದಿದ್ದೇಗೆ?
ಬೆಳಗಾವಿ:ಐವರು ನಕಲಿ ಪೊಲೀಸರನ್ನು ಬೆಳಗಾವಿ ಪೊಲೀಸರು ಬಂಧಿಸಿದ್ದಾರೆ.
ಸುಳೇಭಾವಿ ಗ್ರಾಮದ ಜಾಕೀರಹುಸೇನ್(42),ಬಸವರಾಜ ಗುರಪ್ಪ(32),ಮೋಹನ(38),ಶಾಹಬುದ್ದಿನ್(41)ಹಾಗೂ ನಯೀಮ್ (30)ಎಂಬವರನ್ನು ಬಂಧಿಸಲಾಗಿದೆ.
ರಾಮತೀರ್ಥ ನಗರದ ಅತಾವುಲ್ಲಾ ಹಯಾತ್ ಎಂಬವರು ಕಾರಿನಲ್ಲಿ ಹೊರಟಿದ್ದಾಗ ಇಂಡಿಕಾ ಕಾರಿನಲ್ಲಿ ಬಂದ ಐವರು ಪೊಲೀಸರ ವೇಷಧಾರಿಗಳು ವಾಹನ ತಪಾಸಣೆ ನಡೆಸಿದ್ದಾರೆ.ನಿಮ್ಮ ಕಾರಿನಲ್ಲಿ ಗಾಂಜಾ ಇದೆ ಎಂದು ಹೇಳಿ,ಕಿತ್ತೂರು ಪೊಲೀಸ್ ಠಾಣೆಗೆ ಬ್ಯಾಗ್ ತೆಗೆದುಕೊಂಡು ಹೋಗುವುದಾಗಿ ಹೇಳಿ 4.79 ಲಕ್ಷ ರೂ.ದೋಚಿದ್ದಾರೆ.ಈ ಬಗ್ಗೆ ಅತಾವುಲ್ಲಾ ಕಿತ್ತೂರು ಠಾಣೆಯಲ್ಲಿ ದೂರು ನೀಡಿದ್ದರು.
ತನಿಖೆ ಆರಂಭಿಸಿದ ಪೊಲೀಸರು ಐವರನ್ನು ಬಂಧಿಸಿ 70 ಸಾವಿರ ರೂ.ನಗದು ಹಣ ಹಾಗೂ ಇಂಡಿಕಾ ಕಾರನ್ನು ವಶಪಡಿಸಿಕೊಂಡಿದ್ದಾರೆ.