ಬೆಳಗಾವಿ;ಮಹಿಳೆಯೊಬ್ಬರು ಯುವಕನನ್ನು ಚೂರಿಯಿಂದ ಇರಿದು ಕೊಲೆ ಮಾಡಿರುವ ಘಟನೆ ನಗರದ ಹಳೆ ಪಿಬಿ ರಸ್ತೆಯಲ್ಲಿ ನಡೆದಿದೆ.
ಬೆಳಗಾವಿ ತಾಲೂಕಿನ ತಾರಿಹಾಳ ಗ್ರಾಮದ ನಾಗರಾಜ ಭೀಮ ಸಿ ಪಾಟೀಲ್(28) ಕೊಲೆಯಾದ ಯುವಕ ಎಂದು ತಿಳಿದು ಬಂದಿದೆ. ಚಾಕು ಇರಿದ ಕಂಗ್ರಾಳಿ ಕೆ.ಎಚ್.ಗ್ರಾಮದ ಜಯಶ್ರೀ ಪವಾರ ಎಂಬ ಮಹಿಳೆಯನ್ನು ಪೊಲೀಸರು ಬಂಧಿಸಿದ್ದಾರೆ.
ಭಾನುವಾರ ತಡರಾತ್ರಿ ಮಹಿಳೆಯೊಬ್ಬರು ಕುಡಿದ ಅಮಲಿನಲ್ಲಿ ಕೈಯಲ್ಲಿ ಚಾಕು ಹಿಡಿದುಕೊಂಡು ರಸ್ತೆಯಲ್ಲಿ ತೂರಾಡುತ್ತಿದ್ದಳು.ಈ ವೇಳೆ ಬೈಕ್ ನಲ್ಲಿ ಬಂದ ನಾಗರಾಜ ಆ ಮಹಿಳೆಯನ್ನು ವಿಚಾರಿಸಿದ್ದಾನೆ. ಈ ವೇಳೆ ಕೋಪಗೊಂಡ ಮಹಿಳೆ ಯುವಕನ ಜೊತೆ ಜಗಳ ಮಾಡಿ ಚೂರಿಯಿಂದ ಇರಿದಿದ್ದಾಳೆ.
ತಕ್ಷಣವೇ ಸ್ಥಳೀಯರು ನಾಗರಾಜ ಅವರನ್ನು ಜಿಲ್ಲಾ ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.ಮಹಿಳೆಯ ಹುಚ್ಚಾಟಕ್ಕೆ ಯುವಕನೋರ್ವ ಸಾವಿಗೆ ಈಡಾಗಿದ್ದು ಜನರಲ್ಲಿ ಆತಂಕಕ್ಕೆ ಕಾರಣವಾಗಿದೆ.
ಘಟನೆ ಬಳಿಕ ಮಹಿಳೆಯನ್ನು ಪೊಲೀಸರು ಬಂಧಿಸಿದ್ದು, ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ.ಮಹಿಳೆಯನ್ನು ಬಂಧಿಸಿ ಇದೀಗ ಪೊಲೀಸರು ಹೆಚ್ಚಿನ ವಿಚಾರಣೆ ನಡೆಸುತ್ತಿದ್ದಾರೆ.