ಬೆಳಗಾವಿ; ಫಾತಿಮಾ ಮಸೀದಿಗೆ ಬೀಗ, ಮಸೀದಿ ಅನದೀಕೃತ ಎಂದು ಆರೋಪಿಸಿದ್ದ ಬೆನ್ನಲ್ಲೇ ಬೆಳವಣಿಗೆ

ಬೆಳಗಾವಿ; ಅನಧಿಕೃತವಾಗಿ ಮಸೀದಿ ನಿರ್ಮಾಣ ಆರೋಪ ಕೇಳಿ ಬಂದ ಹಿನ್ನೆಲೆ ಸಾರಥಿ ನಗರದ ವಸತಿ ನಿವೇಶನವೊಂದರಲ್ಲಿ ಇದ್ದ ಫಾತಿಮಾ ಮಸೀದಿಗೆ ಬೀಗ ಜಡಿಯಲಾಗಿದೆ.

ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತ ಡಾ.ರುದ್ರೇಶ್ ಘಾಳಿ ಮಸೀದಿಗೆ ಬೀಗ ಹಾಕುವಂತೆ ವಕ್ಫ್ ಬೋರ್ಡ್‌ಗೆ ನೋಟಿಸ್ ನೀಡಿದ್ದರು.

ಅನುಮೋದಿತ ನಕ್ಷೆ ಉಲ್ಲಂಘಿಸಿ ಧಾರ್ಮಿಕ ಕಟ್ಟಡ ಕಟ್ಟುತ್ತಿರುವ ಆರೋಪ ಕೇಳಿ ಬಂದಿತ್ತು. ಕಟ್ಟಡ ಕಾಮಗಾರಿ ಹಾಗೂ ಧಾರ್ಮಿಕ ಚಟುವಟಿಕೆ ತಕ್ಷಣ ನಿಲ್ಲಿಸಲು ಬೆಳಗಾವಿ ಜಿಲ್ಲಾ ವಕ್ಫ್ ಕಾರ್ಯಾಲಯದ ಅಧಿಕಾರಿಗೆ ಮಹಾನಗರ ಪಾಲಿಕೆ ಆಯುಕ್ತರು ನೋಟಿಸ್ ನೀಡಿದ್ದರು.

ಇದಲ್ಲದೆ ಅಕ್ರಮ ಮಸೀದಿ ನಿರ್ಮಿಸಲಾಗಿದೆ ಎಂದು ಸಂಘಪರಿವಾರ ಮತ್ತು ಬಿಜೆಪಿ ಆರೋಪಿಸಿತ್ತು. ಇದರ ಬೆನ್ನಲ್ಲೇ ಪಾಲಿಕೆ ಆಯುಕ್ತರು ಮಸೀದಿಗೆ ಬೀಗ ಹಾಕಿಸಿದ್ದಾರೆಂದು ವರದಿಯಾಗಿದೆ.

ಟಾಪ್ ನ್ಯೂಸ್