ತೆಲಂಗಾಣದಲ್ಲಿ ಭೀಕರ ಅಪಘಾತ; ಬೆಳಗಾವಿಯ ಒಂದೇ ಕುಟುಂಬದ ಐವರು ದುರ್ಮರಣ

ತೆಲಂಗಾಣದ ಸೂರ್ಯಪೇಠ ಜಿಲ್ಲೆಯ ಮಠಮಪಲ್ಲಿ ಬಳಿ ನಡೆದ ಭೀಕರ ಅಪಘಾತದಲ್ಲಿ ಬೆಳಗಾವಿಯ ಅಥಣಿ ತಾಲೂಕಿನ ಬಡಚಿ ಗ್ರಾಮದ ಒಂದೇ ಕುಟುಂಬದ ಐವರು ಮೃತಪಟ್ಟಿದ್ದಾರೆ.

ಕಡಪ-ಚಿತ್ತೂರ್ ರಾಷ್ಟ್ರೀಯ ಹೆದ್ದಾರಿಯಲ್ಲಿ ಕ್ರೂಸರ್ ಹಾಗೂ ಲಾರಿ ನಡುವೆ ಅಪಘಾತ ಸಂಭವಿಸಿದೆ‌.

36 ವರ್ಷದ ಶೋಭಾ ಆಜೂರ, 14 ವರ್ಷದ ಅಂಬಿಕಾ ಆಜೂರ, 32 ವರ್ಷದ ಮಾನಂದಾ ಆಜೂರ, 42 ವರ್ಷದ ಹನುಮಂತ ಆಜೂರ,32 ವರ್ಷದ ಹನುಮಂತ ಜಾಧವ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಇನ್ನು ಘಟನೆಯಲ್ಲಿ 11 ಮಂದಿಗೆ ಗಂಭೀರ ಗಾಯಗಳಾಗಿದ್ದು, ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಶ್ರೀಶೈಲ ದರ್ಶನ ಪಡೆದು ಬಳಿಕ ತಿರುಪತಿಗೆ ತೆರಳಿದ್ದರು. ಬಳಿಕ ತಿರುಪತಿ ತಿಮ್ಮಪ್ಪನ ದರ್ಶನ ಮಾಡಿ ಮನೆಗೆ ವಾಪಸ್ ಬರುವಾಗ ಅಪಘಾತ ಸಂಭವಿಸಿದ್ದು, ಐವರು ಸಾವನ್ನಪ್ಪಿದ್ದಾರೆ.

ಟಾಪ್ ನ್ಯೂಸ್