ಬೀದರ್: ಕಾರಿನಡಿಗೆ ಬಿದ್ದು 2ವರ್ಷದ ಮಗು ಮೃತ್ಯು

ಬೀದರ್: ಇನ್ನೋವಾ ಕಾರಿನಡಿಗೆ ಬಿದ್ದು 2ವರ್ಷದ ಮಗು ಮೃತಪಟ್ಟ ಘಟನೆ ನಗರದ ಹಾರೂರಗೇರಿ ಸಮೀಪದ ಡಾ. ಗುರುಪಾದಪ್ಪ ನಾಗಮಾರಪಳ್ಳಿ ಆಸ್ಪತ್ರೆ ಎದುರು ಮಂಗಳವಾರ ಸಂಜೆ ನಡೆದಿದೆ.

ಘಟನೆಯ ದೃಶ್ಯ ಸಿಸಿಟಿವಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಸತೀಶ ಪಾಟೀಲ್ ಹಾಗೂ ಸಂಗೀತಾ ದಂಪತಿಯ ಪುತ್ರ ಬಸವಚೇತನ ಮೃತ ಮಗು.

ಮಂಗಳವಾರ ಸಂಜೆ ಮಗು ಆಸ್ಪತ್ರೆಯ ಎದುರು ಆಟವಾಡುತ್ತಿತ್ತು. ಈ ವೇಳೆ ವ್ಯಕ್ತಿಯೋರ್ವ ಮೊಬೈಲ್ ಫೋನ್ ನಲ್ಲಿ ಮಾತನಾಡುತ್ತ ಇನ್ನೋವಾ ಕಾರು ಚಲಾಯಿಸುತ್ತಾ ಬಂದಿದ್ದು, ಮಗುವನ್ನು ಗಮನಿಸದೆ ಢಿಕ್ಕಿ ಹೊಡೆದಿದ್ದಾನೆ. ಮಗು ಕಾರಿನ ಚಕ್ರದಡಿಗೆ ಸಿಲುಕಿ ಸ್ಥಳದಲ್ಲೇ ಕೊನೆಯುಸಿರೆಳೆದಿದೆ.

ಈ ಬಗ್ಗೆ ಗಾಂಧಿಗಂಜ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಟಾಪ್ ನ್ಯೂಸ್