ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು ಮಾಟ ಮಂತ್ರ ಆಚರಣೆಗಳಿಗಾಗಿ ತನ್ನ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆ ಸೇರಿ 7 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮುಂಬೈ;ಆಘಾತಕಾರಿ ಘಟನೆಯೊಂದು ವರದಿಯಾಗಿದ್ದು ಮಾಟ ಮಂತ್ರ ಆಚರಣೆಗಳಿಗಾಗಿ ತನ್ನ ಮುಟ್ಟಿನ ರಕ್ತವನ್ನು ಸಂಗ್ರಹಿಸಿ ಕಿರುಕುಳ ನೀಡಿದ ಆರೋಪದ ಮೇಲೆ ಮಹಿಳೆಯೊಬ್ಬರು ತನ್ನ ಪತಿ ಮತ್ತು ಅತ್ತೆ ಸೇರಿ 7 ಮಂದಿ ವಿರುದ್ಧ ದೂರು ದಾಖಲಿಸಿದ್ದಾರೆ.
ಮಹಾರಾಷ್ಟ್ರದ ಬೀಡ್ ಜಿಲ್ಲೆಯ ಸೌಂದಾನಾ ಗ್ರಾಮದಲ್ಲಿ
ವಿವಾಹಿತ ಮಹಿಳೆಯ ಮೇಲೆ ಅತ್ಯಾಚಾರ ಎಸಗಿ, ಹಸಿವಿನಿಂದ ಬಳಲುವಂತೆ ಮಾಡಿ, ಆಕೆಯ ಮುಟ್ಟಿನ ರಕ್ತವನ್ನು ಸಂಗ್ರಹಿಸಿ 50 ಸಾವಿರ ರೂ.ಗೆ ಮಾರಾಟ ಮಾಡಿರುವ ಆರೋಪ ಕೇಳಿ ಬಂದಿದೆ.
27 ವರ್ಷದ ಸಂತ್ರಸ್ತ ಮಹಿಳೆಯನ್ನು ಮುಟ್ಟಿನ ಸಮಯದಲ್ಲಿ ಮೂರು ದಿನಗಳ ಕಾಲ ಹಸಿವಿನಿಂದ ಕೂರಿಸಿದ್ದಾರೆ.ಆಕೆಯ ಅತ್ತೆ ಮನೆಮಂದಿ ಮುಟ್ಟಿನ ಅವಧಿಯಲ್ಲಿ ಅವಳನ್ನು ಕಟ್ಟಿಹಾಕಿ ಹತ್ತಿಯನ್ನು ಬಳಸಿ ಮುಟ್ಟಿನ ರಕ್ತವನ್ನು ಸಂಗ್ರಹಿಸಿ, ಅದನ್ನು ವಾಮಾಚಾರ ಮಾಡುವವರಿಗೆ ಮಾರಾಟ ಮಾಡಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಬೀಡ್ ಜಿಲ್ಲೆಯಲ್ಲಿ ಈ ಘಟನೆ ನಡೆದಿದೆ.ವಿಶ್ರಾಂತವಾಡಿ ಪೊಲೀಸರಿಗೆ ದೂರು ನೀಡಲಾಗಿದ್ದು, ಇದೀಗ ಪ್ರಕರಣವನ್ನು ಬೀಡು ಜಿಲ್ಲೆಗೆ ವರ್ಗಾಯಿಸಲಾಗಿದೆ.