ರಾಷ್ಟ್ರಧ್ವಜವನ್ನು ಹಿಡಿಯಲು ನಿರಾಕಾರಿಸಿದ ಅಮಿತ್ ಶಾ ಪುತ್ರ; ವಿವಾದಕ್ಕೆ ಕಾರಣವಾದ ಜಯ್ ಶಾ ಅವರ ವಿಡಿಯೋ ವೀಕ್ಷಿಸಿ

ನವದೆಹಲಿ;ಬಿಸಿಸಿಐ ಕಾರ್ಯದರ್ಶಿ ಅಮಿತ್ ಶಾ ಪುತ್ರ ವಿವಾದಕ್ಕೆ ಸುದ್ದಿಯಾಗಿದ್ದಾರೆ. ಅವರು ದುಬೈನಲ್ಲಿ ನಡೆದ ಏಷ್ಯಕಪ್ 2022ರ ಭಾರತ ಪಾಕಿಸ್ತಾನದ ಕ್ರಿಕೆಟ್ ಸಂಧರ್ಭದಲ್ಲಿ ಭಾರತದ ಧ್ವಜವನ್ನು ಹಿಡಿಯಲು ನಿರಾಕರಿಸಿರುವ ವಿಡಿಯೋ ವೈರಲ್ ಆಗಿದೆ.

ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ವ್ಯಕ್ತಿಯೊಬ್ಬರು ತ್ರಿವರ್ಣ ಧ್ವಜವನ್ನು ಕೈಯ್ಯಲ್ಲಿ ಹಿಡಿದುಕೊಂಡು ಸಂಭ್ರಮಿಸುವಂತೆ ಧ್ವಜವೊಂದನ್ನು ನೀಡುತ್ತಾರೆ. ಆದರೆ ಜಯ್ ಶಾ ಅವರು ಅದನ್ನು ಪಡೆಯಲು ನಿರಾಕರಿಸಿದ್ದರು. ಜಯ್ ಶಾ ಅವರ ಈ ವಿಡಿಯೋ ವೈರಲ್ ಬೆನ್ನಲ್ಲೇ ಭಾರೀ ಆಕ್ರೋಶ ವ್ಯಕ್ತವಾಗಿದೆ.

ತ್ರಿವರ್ಣ ಧ್ವಜ ಪಡೆಯಲು ನಿರಾಕರಿಸಿ ಭಾರತದ ಧ್ವಜಕ್ಕೆ ಅವಮಾನ ಮಾಡಲಾಗಿದೆ ಎಂದು ನೆಟ್ಟಿಗರು ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.

ಬಿಜೆಪಿಯೇತರ ಯಾರಾದರೂ ಮಾಡಿದ್ದರೆ ಬಿಜೆಪಿ ಐಟಿ ಸೆಲ್ ಸದಸ್ಯರು ಅವರನ್ನು ದೇಶದ್ರೋಹಿಗಳ ಪಟ್ಟ ನೀಡಲು ಮುಗಿ ಬೀಳುತ್ತಿತ್ತು ಎಂದು ಹಲವರು ವಿಡಿಯೋವನ್ನು ಉಲ್ಲೇಖಿಸಿ ಟ್ವೀಟ್ ಮಾಡಿ ತರಾಟೆಗೆ ತೆಗೆದುಕೊಂಡಿದ್ದಾರೆ.

 

ಟಾಪ್ ನ್ಯೂಸ್