ಬೆಂಗಳೂರು:ಬಿಬಿಎಂಪಿ ಮಾಜಿ ಸದಸ್ಯ ದೊಡ್ಡಯ್ಯ ಎಂಬುವವರ ಪುತ್ರ ಗೌತಮ ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ನಿನ್ನೆ ರಾತ್ರಿ ಗೌತಮ್ ಮನೆಯಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದು,ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದುಬಂದಿಲ್ಲ.
ಮಾಹಿತಿ ತಿಳಿದು ಸ್ಥಳಕ್ಕೆ ದೌಡಾಯಿಸಿರುವ ಚಂದ್ರಾಲೇಔಟ್ ಪೊಲೀಸರು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಿದ್ದಾರೆ.
ಗೌತಮ್ಗೆ ತಂದೆ ದೊಡ್ಡಯ್ಯ ಕಾಂಗ್ರೆಸ್ ನಾಯಕರಾಗಿದ್ದು, ಅತ್ತಿಗುಪ್ಪೆ ವಾರ್ಡ್ನ ಮಾಜಿ ಕಾರ್ಪೋರೇಟರ್ ಆಗಿದ್ದಾರೆ.
ಗೌತಮ್ ಗೆ ಊಟಕ್ಕೆ ಕರೆಯಲು ರೂಮ್ಗೆ ಹೋಗಿದ್ದೆವು. ಫೋನ್ ಮಾಡಿದ್ರೆ ರಿಸೀವ್ ಮಾಡ್ತಿರಲಿಲ್ಲ.ಬಾಗಿಲು ತೆಗೆಸಿ ನೋಡಿದರೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂದು ಹೇಳಿದ್ದಾರೆ.
ಗೌತಮ್ ಗುತ್ತಿಗೆದಾರ ಅಲ್ಲ.ಅವನ ಹತ್ತಿರ ಲೈಸೆನ್ಸ್ ಕೂಡ ಇರಲಿಲ್ಲ.ಈವರೆಗೆ ಏನ್ ಕೇಳಿ ಬಂದಿದೆ ಅದೆಲ್ಲಾ ಸುಳ್ಳು ಸುದ್ದಿ ಎಂದು ದೊಡ್ಡಣ್ಣ ಹೇಳಿದ್ದಾರೆ.
ಪಶ್ಚಿಮ ವಿಭಾಗದ ಡಿಸಿಪಿ ಲಕ್ಷ್ಮಣ್ ನಿಂಬರಗಿ ಪ್ರತಿಕ್ರಿಯಿಸಿ, ದೊಡ್ಡಯ್ಯ ಅತ್ತಿಗುಪ್ಪೆ ಮಾಜಿ ಕಾರ್ಪೋರೇಟರ್ ಆಗಿದ್ದಾರೆ. ಇವರಿಗೆ ಮೂರು ಜನ ಮಕ್ಕಳಿದ್ದಾರೆ.ಗೌತಮ್ ಮೂರನೇ ಮಗ.ಪ್ರತಿ ದಿನ ಲೇಟ್ ಆಗಿ ಮನೆಗೆ ಬರ್ತಿದ್ದನಂತೆ. ನಿನ್ನೆ ಊಟಕ್ಕೆ ಕರೆದಾಗ ಆತ ಬಾಗಿಲು ಓಪನ್ ಮಾಡಿಲ್ಲ. ಆ ಬಳಿಕ ಡೋರ್ ತೆಗೆದು ನೋಡಿದಾಗ, ನೇಣು ಬಿಗಿದ ಸ್ಥಿತಿಯಲ್ಲಿ ಶವ ಪತ್ತೆಯಾಗಿದೆ.ಸದ್ಯ ವೈಯಕ್ತಿಕ ವಿಚಾರಕ್ಕೆ ಅಂತ ಗೊತ್ತಾಗಿದೆ.ಡೆತ್ ನೋಟ್ ಏನೂ ಸಿಕ್ಕಿಲ್ಲ. ಯುಡಿಆರ್ ಪ್ರಕರಣ ದಾಖಲಿಸಿಕೊಂಡು ತನಿಖೆ ಮಾಡ್ತಿದ್ದೇವೆ ಎಂದಿದ್ದಾರೆ.