ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಒಂದೇ ಮನೆಯ ನಾಲ್ವರು ಸಾವು
ರಾಜಸ್ಥಾನ;ಹಿಟ್ಟಿನ ಗಿರಣಿಯಲ್ಲಿ ವಿದ್ಯುತ್ ಸ್ಪರ್ಶಗೊಂಡು ಒಂದೇ ಕುಟುಂಬದ ನಾಲ್ವರು ಮೃತಪಟ್ಟ ಘಟನೆ ಬಾರ್ಮರ್ ಜಿಲ್ಲೆಯಲ್ಲಿ ನಡೆದಿದೆ.
ಈ ಹಿಟ್ಟಿನ ಗಿರಣಿ ಅರ್ಜುನ ಸಿಂಗ್ ಎಂಬವರಿಗೆ ಸೇರಿದ್ದು, ಅರ್ಜುನ ಸಿಂಗ್ ಘಟನೆ ನಡೆದ ದಿನ ದೆಹಲಿಗೆ ತೆರಳಿದ್ದರು. ಈ ಕಾರಣದಿಂದ ಅರ್ಜುನ ಸಿಂಗ್ ಅವರ ಪತ್ನಿ ಹಿಟ್ಟಿನ ಗಿರಣಿಯನ್ನು ನೋಡಿಕೊಳ್ಳುತ್ತಿದ್ದರು.
ಚಲಿಸುವ ಹಿಟ್ಟಿನ ಗಿರಣಿಯಿಂದ ಅರ್ಜುನ ಸಿಂಗ್ ಅವರ ಪತ್ನಿಗೆ ವಿದ್ಯುತ್ ಶಾಕ್ ಹೊಡೆದಿದೆ.ಇದನ್ನು ನೋಡಿದ ಅವರ ಇಬ್ಬರು ಮಕ್ಕಳು ಕೂಡಲೇ ತಾಯಿಯನ್ನು ರಕ್ಷಿಸಲು ಹೋಗಿದ್ದಾರೆ.ಆದರೆ ಅವರು ಸಂಪರ್ಕಕ್ಕೆ ಬಂದ ಕಾರಣ ವಿದ್ಯುತ್ ಸ್ಪರ್ಶದಿಂದ ಮಕ್ಕಳು ಕೂಡ ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಇದಲ್ಲದೆ ಅರ್ಜುನ ಅವರ ಮಾವ ಮೂವರನ್ನು ರಕ್ಷಣೆ ಮಾಡಲು ಹೋಗಿದ್ದು, ಅವರು ಕೂಡ ವಿದ್ಯುತ್ ಸ್ಪರ್ಶಕ್ಕೆ ಒಳಗಾಗಿ ಮೃತಪಟ್ಟಿದ್ದಾರೆ.