ರಾಜಸ್ಥಾನ;ರಾಜಸ್ಥಾನದಲ್ಲಿ ಇಂದು ಭಾರತ್ ಜೋಡೋ ಯಾತ್ರೆಯ ನಾಲ್ಕನೇ ದಿನ.ಕೋಟಾದ ಸೂರ್ಯಮುಖಿ ಹನುಮಾನ್ ದೇವಸ್ಥಾನದ ಬಳಿಯಿಂದ ಬೆಳಿಗ್ಗೆ 6.15 ರ ಸುಮಾರಿಗೆ ಯಾತ್ರೆ ಆರಂಭವಾಗಿದೆ.
ಬೆಳಗ್ಗೆಯಿಂದಲೇ ಯಾತ್ರೆ ಮಾರ್ಗದಲ್ಲಿ ಜನಸಾಗರವೇ ಹರಿದು ಬಂದಿತ್ತು.ನಗರದ ಅನಂತಪುರ ಪ್ರದೇಶದಲ್ಲಿ ಜನರು ರಾಹುಲ್ ಗಾಂಧಿ ಅವರ ಭದ್ರತಾ ಪಡೆಯನ್ನು ಸರಿಸಿ ಅವರ ಬಳಿಗೆ ಬರಲು ಯತ್ನಿಸಿದಾಗ ನೂಕುನುಗ್ಗಲು ಉಂಟಾಗಿದೆ. ಆದರೆ, ಭದ್ರತಾ ಸಿಬ್ಬಂದಿ ಕೂಡಲೇ ಹಗ್ಗಗಳನ್ನು ಬಳಸಿ ಜನರನ್ನು ತಡೆದಿದ್ದಾರೆ.
ರಾಹುಲ್ ಗಾಂಧಿ ಇಂದು ಬೆಳಗ್ಗೆ ರಾಜೀವ್ ಗಾಂಧಿ ನಗರದಲ್ಲಿನ ರಾಜೀವ್ ಗಾಂಧಿ ಪ್ರತಿಮೆಗೆ ಲ್ಯಾಪ್ಟಾಪ್ ಸಹಾಯದಿಂದ ಮಾಲಾರ್ಪಣೆ ಮಾಡಲು ಹೋಗುತ್ತಿದ್ದ ವೇಳೆ ವೇದಿಕೆ ಪಕ್ಕದಲ್ಲೇ ಇದ್ದ ಯುವಕನೋರ್ವ ಮೈಮೇಲೆ ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆಗೆ ಯತ್ನಿಸಿದ ಘಟನೆ ನಡೆದಿದೆ.
ಈ ವೇಳೆ ಗದ್ದಲ ಉಂಟಾಗಿ ರಾಹುಲ್ ಗಾಂಧಿ ವೇದಿಕೆಗೆ ಹೋಗುವುದು ಸಾಧ್ಯವಾಗಲಿಲ್ಲ.
ಯುವಕ ಮೂರು ಜೊತೆ ಬಟ್ಟೆ ಧರಿಸಿಕೊಂಡಿದ್ದು, ಪಕ್ಕದಲ್ಲಿವರು ತಕ್ಷಣ ಬೆಂಕಿ ನಂದಿಸಿದ್ದಾರೆ. ಆತ್ಮಹತ್ಯೆಗೆ ಯತ್ನಿಸಿದ ಯುವಕನಿಗೆ ಆಂಬ್ಯಲೆನ್ಸ್ ಮೂಲಕ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ. ಪೊಲೀಸರು ಮತ್ತು ಸಿಐಡಿ ಗುಪ್ತಚರ ದಳದವರು ಕೂಡ ಆಸ್ಪತ್ರೆಗೆ ತೆರಳಿದ್ದು, ಯುವಕನನ್ನು ವಶಕ್ಕೆ ಪಡೆದಿದ್ದಾರೆ.