ಪುತ್ತೂರು; ಆರ್ ಟಿಒ ಕಚೇರಿಯಲ್ಲಿ ಏಜೆಂಟ್ ಆಗಿ ಕೆಲಸ ಮಾಡುತ್ತಿದ್ದ ಖಾಸೀಂ ಹೃದಯಾಘಾತದಿಂದ ಮೃತ್ಯು

ಪುತ್ತೂರು;ಹೃದಯಾಘಾತದಿಂದ ವ್ಯಕ್ತಿಯೋರ್ವರು ಮೃತಪಟ್ಟ ಘಟನೆ ಪುತ್ತೂರಿನ‌ ಬನ್ನೂರಿನಲ್ಲಿ ನಡೆದಿದೆ.

ಖಾಸೀಂ ಮೃತರು.‌ಇವರು ಆರ್ ಟಿಒ ಕಚೇರಿಯಲ್ಲಿ ಏಜೆಂಟರಾಗಿ ಕೆಲಸ ಮಾಡುತ್ತಿದ್ದರು.‌ಇವರು ಪುತ್ರರು ಕೂಡ ಇದೇ ಕೆಲಸ ಮಾಡುತ್ತಿದ್ದರು.

ಮಧ್ಯಾಹ್ನ ಎದೆನೋವು ಕಾಣಿಸಿಕೊಂಡ ಹಿನ್ನೆಲೆ ಇವರನ್ನು ಪುತ್ತೂರಿನ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆಸ್ಪತ್ರೆಯ ಇಸಿಜಿ ಕೊಠಡಿಗೆ ಕರೆದುಕೊಂಡು ಹೋಗುವಾಗಲೇ ಕೊನೆಯುಸಿರೆಳೆದಿದ್ದಾರೆ ಎನ್ನಲಾಗಿದೆ.

ಮೃತರು ಪತ್ನಿ, ಮತ್ತು ಮೂವರು ಪುತ್ರರು, ಕುಟುಂಬ ವರ್ಗವನ್ನು ಅಗಲಿದ್ದಾರೆ.

ಟಾಪ್ ನ್ಯೂಸ್