ಬಂಟ್ವಾಳ; ರೋಗಿಯನ್ನು ಸಾಗಿಸುವಾಗ ಆಂಬ್ಯುಲೆನ್ಸ್ ಪಲ್ಟಿ, ಚಾಲಕ ದುರ್ಮರಣ

-ಶಬೀರ್ ಮೃತ ಯುವಕ

ಬಂಟ್ವಾಳ: ರೋಗಿಯನ್ನು ಸಾಗಿಸುವಾಗ ಆ್ಯಂಬುಲೆನ್ಸ್ ವಾಹನವೊಂದು‌ ಪಲ್ಟಿಯಾಗಿ ಆಂಬ್ಯಲೆನ್ಸ್ ಸವಾರ ಮೃತಪಟ್ಟ ಘಟನೆ ವಗ್ಗ ಸಮೀಪದ ಅಂಚಿಕಟ್ಟೆ ಎಂಬಲ್ಲಿ ನಡೆದಿದೆ.

ಮೃತ ಅಂಬುಲೆನ್ಸ್ ಚಾಲಕನನ್ನು ಗುರುವಾಯನಕೆರೆ ನಿವಾಸಿ ಶಬೀರ್ ಎಂದು ಗುರುತಿಸಲಾಗಿದೆ.

ಬೆಳ್ತಂಗಡಿ ಕಡೆಯಿಂದ ಮಂಗಳೂರು ಕಡೆಗೆ ಹೋಗುತ್ತಿದ್ದ ಅಂಬ್ಯುಲೆನ್ಸ್ ವಾಹನ ವಗ್ಗ ಸಮೀಪದ ಕೊಪ್ಪಳ ಅಂಚಿಕಟ್ಟೆ ಎಂಬಲ್ಲಿ ರಸ್ತೆ ಮಧ್ಯ ಪಲ್ಟಿಯಾಗಿದೆ‌.ಘಟನೆಯಲ್ಲಿ ಚಾಲಕ ಶಬೀರ್ ಗಂಭೀರವಾಗಿ ಗಾಯಗೊಂಡಿದ್ದರು.

ಬಳಿಕ ಶಬೀರ್ ಚಿಕಿತ್ಸೆ ಗೆ ಸ್ಪಂದಿಸಿದೆ ಮೃತಪಟ್ಟಿದ್ದಾರೆ.
ವಾಹನದಲ್ಲಿದ್ದ ರೋಗಿಯನ್ನು ಬದಲಿ ವಾಹನದಲ್ಲಿ ಮಂಗಳೂರಿನ ಆಸ್ಪತ್ರೆಗೆ ಸಾಗಿಸಲಾಗಿದೆ.

ಟಾಪ್ ನ್ಯೂಸ್