ಪುತ್ತೂರಿನ ಯುವಕ ಬಂಟ್ವಾಳದಲ್ಲಿ ನೇತ್ರಾವತಿ ನದಿಗೆ ಹಾರಿ ಆತ್ಮಹತ್ಯೆ

ಬಂಟ್ವಾಳ;ನೇತ್ರಾವತಿ‌ ನದಿಗೆ ಹಾರಿ ಪುತ್ತೂರಿನ ಯುವಕನೋರ್ವ ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ.

ವಿಠ್ಠಲ್ ಕಾಮತ್ ಅವರ ಪುತ್ರ ವಿಘ್ನೇಶ್ ಕಾಮತ್(32) ಆತ್ಮಹತ್ಯೆ ಮಾಡಿಕೊಂಡವರು.

ಇವರು ಕೆಮ್ಮಿಂಜೆ ನಿವಾಸಿಯಾಗಿದ್ದು, ಪುತ್ತೂರು ಕೋರ್ಟ್ ರೋಡ್ ನಲ್ಲಿ ಜಿನಸಿ ಅಂಗಡಿಯನ್ನು ಕಳೆದ ಹಲವು‌ ವರ್ಷಗಳಿಂದ ನಡೆಸುತ್ತಿದ್ದರು ಎನ್ನಲಾಗಿದೆ.

ವಿಘ್ನೇಶ್ ಈ ಮೊದಲು ಕೂಡ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದೆ. ನೇತ್ರಾವತಿ ನದಿ ಬಳಿ ಸಂಶಯಾಸ್ಪದ ನೆಲೆಯಲ್ಲಿ ವಾಹನ‌ ಕಂಡ ಹಿನ್ನೆಲೆ ಸ್ಥಳೀಯರು ಹುಡುಕಾಟ ನಡೆಸಿದಾಗ ಮೃತದೇಹ ಪತ್ತೆಯಾಗಿದೆ.

ಮೃತದೇಹ ಬಂಟ್ವಾಳ ಸರಕಾರಿ ಅಸ್ಪತ್ರೆಗೆ ಸಾಗಿಸಲಾಗಿದೆ.ಈ ಕುರಿತು‌ ಬಂಟ್ವಾಳ ಠಾಣೆಯಲ್ಲಿ ಕೇಸ್ ದಾಖಲಾಗಿದೆ.

ಟಾಪ್ ನ್ಯೂಸ್